ಬೇಸಿಗೆ ಕಾಲದಲ್ಲಿ ಮನೆಯಿಂದ ಹೊರಬರುವುದೇ ಕಷ್ಟ. ಅಷ್ಟು ಉಷ್ಣತೆಯ ತಾಪ. ಕಳೆದ ವರ್ಷಗಿಂತ ಈ ವರ್ಷ ಬೇಸಿಗೆಯ ಉಷ್ಣತೆ ಜಾಸ್ತಿ. ಹೊರಗಿನ ಜ್ಯೂಸ್, ಮಿಲ್ಕ್-ಶೇಕ್ ಗಳನ್ನು ಮಾಡಿ ಮನೆಯಲ್ಲಿಯೇ ಸವಿಯೋಣ.
ಬೇಕಾಗುವ ಸಾಮಾಗ್ರಿ:
1.ಅರ್ಧ ಕಪ್ ತುರಿದ ಬೀಟ್ ರೂಟ್
2.1 ಕಪ್ ಹಾಲು
3.1 ಚಮಚ ಬಾದಾಮಿ ಚೂರು
4.3-4 ಚಮಚ ಸಕ್ಕರೆ
5.2 ಬಿಂದು ವೆನ್ನಿಲ್ಲಾ ಎಸೆನ್ಸ್
6.ಸ್ವಲ್ಪ ಐಸ್ ಕ್ಯೂಬ್
ತಯಾರಿಸುವ ವಿಧಾನ: ತುರಿದ ಬೀಟ್ ರೂಟ್, ಅರ್ಧ ಕಪ್ ಹಾಲು, ಬಾದಾಮಿ ಚೂರು, ಸಕ್ಕರೆ ಐಸ್ ತುಂಡು ಹಾಕಿ ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿ ನಂತರ ಸ್ವಲ್ಪ ಹಾಲು ಹಾಕಿ ಸರಿಯಾಗಿ ಬೆರೆಸಿ ಗ್ಲಾಸಿಗೆ ಹಾಕಿ ಸವಿಯಿರಿ. ಈ ಪಾನೀಯದಿಂದ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಅಲ್ಲದೇ ಬೇಸಿಗೆಯ ಧಗೆಯನ್ನು ನಿವಾರಿಸಲು ಇದು ಆರೋಗ್ಯದಾಯಕ ಹಾಗೂ ಉತ್ತಮ ಪಾನೀಯವಾಗಿದೆ.