ದಿನಾ ಒಂದೇ ತರಹದ ತಿಂಡಿಗಳನ್ನು ಮಾಡ್ತಾ ಹೋದರೆ ಬೋರಾನಿಸುವುದು ಸಹಜ. ಏನಾದರೂ ಸ್ಪೇಶಲ್ ಆಗಿ ಮಾಡಿದರೆ ಅದರ ಟೇಸ್ಟೇ ಬೇರೆ. ಬನ್ನಿ ನಾವು ಇವತ್ತು ರುಚಿ ರುಚಿಯಾದ ಬೆಡ್ ರೋಲ್ ಮಾಡಿ ಸವಿಯೋಣ.
ಬೇಕಾಗುವ ಸಾಮಾಗ್ರಿ:
1.ಆಲೂಗಡ್ಡೆ – 5-6
2-ಕೊತ್ತಂಬರಿ ಸೊಪ್ಪು
3.ಹಸಿಮೆಣಸಿನ ಕಾಯಿ-2
3. ಉಪ್ಪು-ರುಚಿಗೆ ತಕ್ಕಷ್ಟು
4. ಗರಮ್ ಮಸಾಲಾ ಪುಡಿ-2ಚಮಚ
5.ಈರುಳ್ಳಿ-2
6.ಅರಶಿನ ಪುಡಿ- ಒಂದು ಚಮಚ
7.ಒಣ ಮೆಣಸಿನ ಪುಡಿ-2 ಚಮಚ
8.ಕಾರ್ನ್ ಫ್ಲೋರ್
9.ಕರಿಯಲು ಎಣ್ಣೆ
10.ಲಿಂಬೆರಸ-2ಚಮಚ
ತಯಾರಿಸುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಟ್ಟು ಕೊಳ್ಳಿ. ನಂತರ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಇವೆಲ್ಲವವನ್ನೂ ಹೆಚ್ಚಿಟ್ಟುಕೊಳ್ಳಿ. ಒಲೆಯ ಮೇಲೆ ಬಾಣಲೆಯಲ್ಲಿ ಎಣ್ಣೆ ಹಾಕಿಡಿ. ಅದು ಕಾದ ಮೇಲೆ ಅದಕ್ಕೆ ಈರುಳ್ಳಿ ಹಾಕಿ ಹುರಿಯಿರಿ. ಅರಶಿನ , ಹಸಿಮೆಣಸು, ಉಪ್ಪು, ಕತ್ತರಿಸಿದ ಆಲೂಗಡ್ಡೆ, ಗರಮ್ ಮಸಾಲಾ, ಕೊತ್ತಂಬರಿ ಸೊಪ್ಪು, ಲಿಂಬೆರಸ, ಒಣಮೆಣಸಿನ ಪುಡಿ ಎಲ್ಲವನ್ನೂ ಮಿಶ್ರಣ ಮಾಡಿ. ಬ್ರೆಡ್ಡಿಗೆ ಸ್ವಲ್ಪ ನೀರನ್ನು ತಾಗಿಸಿಕೊಂಡು ಬ್ರೆಡ್ಡಿನ ಮದ್ಯೆ ಮಾಡಿಟ್ಟ ಮಸಾಲವನ್ನು ಹಾಕಿ ಸುತ್ತಿ. ಇಲ್ಲವಾದರೆ ಗೋಲಾಕಾರವಾಗಿ ತಟ್ಟಿ. ಒಂದೊಂದಾಗಿ ಹೀಗೆ ಮಾಡಿಟ್ಟುಕೊಂಡು ಕಡಲೇ ಹಿಟ್ಟು ಅಥವಾ ಕಾನ್ ಫ್ಲೋರ್ ನಲ್ಲಿ ಹೊರಳಾಡಿಸಿ ಕರಿಯಿರಿ. ತೆಂಗಿನಕಾಯಿ ಚಟ್ನಿ ಅಥವಾ ಸಾಸ್ ನೊಂದಿಗೆ ತಿನ್ನಿ.