ಆಲೂಗಡ್ಡೆ ಬೋಂಡಾ, ಚಿಪ್ಸ್ ಅಂದ್ರೆ ನಿಮಗೂ ಇಷ್ಟ ತಾನೇ. ಇಂದು ನಾವು ನಿಮಗೆ ಆಲೂಗಡ್ಡೆ ಈರುಳ್ಳಿ ಪಲ್ಯ ಮಾಡೋದು ಹೇಗೆ ಅಂತಾ ತಿಳಿದುಕೊಳ್ಳೋಣ. ಚಪಾತಿ ಹಾಗೂ ಅನ್ನದೊಂದಿಗೆ ಬಡಿಸಿಕೊಂಡು ತಿನ್ನಲು ಆಲೂ ಪಲ್ಯ ಸೂಕ್ತವಾಗಿದೆ.
ಬೇಕಾಗುವ ಸಾಮಾಗ್ರಿಗಳು : ಬೇಯಿಸಿದ ಆಲೂಗಡ್ಡೆ 4, ಉಪ್ಪು, ಈರುಳ್ಳಿ 1, ಉದ್ದಿನ ಬೇಳೆ 1ಚಮಚ, ಕಡ್ಲೆಬೇಳೆ 1ಚಮಚ, ಹಸಿಮೆಣಸಿನ ಕಾಯಿ 3, ಕರಿಬೇವು, ಕೊತ್ತಂಬರಿ ಸೊಪ್ಪು, ಅರಿಶಿನ ಚಿಟಿಕೆ, ಶುಂಠಿ 1/2 ಇಂಚು, ಸಾಸಿವೆ 1ಚಮಚ,
ತಯಾರಿಸುವ ವಿಧಾನ :
ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಟ್ಟುಕೊಳ್ಳಿ. ಸ್ಟೌ ಮೇಲೆ ಪ್ಯಾನ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಶುಂಠಿ, ಅರಿಶಿನ, ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ. ಇದಾದ ಮೇಲೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಇದು ಹಸಿವಾಸನೆ ಹೋಗೊವರೆಗೂ ಸರಿಯಾಗಿ ಫ್ರೈ ಮಾಡಿ. ನಂತರ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ ಹಾಕಿ . ನಂತರ ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಕಲಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ದೋಸೆ ಅಥವಾ ಚಪಾತಿ ಜೊತೆ ಸರ್ವ್ ಮಾಡಬಹುದು.