ಬೆಳಂ ಬೆಳಗ್ಗೆ ಎದ್ದು ಉಪಾಹಾರಕ್ಕೆ ಏನು ತಯಾರಿಸಲಿ ಎಂಬ ಚಿಂತೆ ಗೃಹಿಣಿಯರಲ್ಲಿ ಇದ್ದೇ ಇರುತ್ತೆ. ಹೆಚ್ಚಿನವರಿಗೆ ಮಶ್ರೂಮ್ ಅಂದರೆ ಬಾಯಲ್ಲಿ ನೀರುಣಿಸುತ್ತೆ. ಮಶ್ರುಮ್ ನಿಂದ ಉಪಾಹಾರಕ್ಕೆ ಬಗೆ ಬಗೆಯ ತಿಂಡಿಗಳನ್ನು ತಯಾರಿಸಬಹುದು. ಬನ್ನಿ ಇವತ್ತು ನಾವು ಸ್ಪೇಶಲ್ ಫುಡ್ ಮಶ್ರೂಮ್ ರೈಸ್ ಬಾತ್ ತಯಾರಿಸೋಣ.
ಬೇಕಾಗುವ ಪದಾರ್ಥಗಳು:
*ಅನ್ನ – – 1 ½ ಕಪ್
*ಅಣಬೆ – 500 ಗ್ರಾಂ
*ಈರುಳ್ಳಿ – 1 (ಕತ್ತರಿಸಿದಂತಹುದು)
*ಮೆಣಸು – 2 ಟೀ.ಚಮಚ
*ಖಾರದಪುಡಿ – 1 ಟೀ.ಚಮಚ
*ಸಾಸಿವೆ ಪುಡಿ – 1 ಟೀ.ಚಮಚ
*ಕೊತ್ತಂಬರಿ ಪುಡಿ – 1 ಟೀ.ಚಮಚ
*ಹಸಿ ಮೆಣಸಿನಕಾಯಿಗಳು – 1 (sliced)
*ಬೆಣ್ಣೆ – 1 ಟೀ.ಚಮಚ
*ಎಣ್ಣೆ – 2 ಟೀ.ಚಮಚ
*ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
*ಮೊದಲು ನೀವು ಅನ್ನವನ್ನು ಪ್ರತ್ಯೇಕವಾದ ತಯಾರಿಸಿಕೊಳ್ಳಬೇಕು. ಇದಾದ ಮೇಲೆ, ಬೆಂದ ಅನ್ನವನ್ನು ಪಕ್ಕದಲ್ಲಿ ಆರಲು ಬಿಡಿ.
*ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ. ಇದು ಕಾದ ಮೇಲೆ, ಇದಕ್ಕೆ ಕತ್ತರಿಸಿದ ಈರುಳ್ಳಿಗಳನ್ನು ಹಾಕಿ. ಅವುಗಳನ್ನು ಹೊಂಬಣ್ಣಕ್ಕೆ ಬರುವವರೆಗು ಮಧ್ಯಮ ಗಾತ್ರದ ಉರಿಯಲ್ಲಿ ಚೆನ್ನಾಗಿ ಉರಿಯಿರಿ. ನಂತರ ಅದಕ್ಕೆ ಹಸಿ ಮೆಣಸಿನ ಕಾಯಿಗಳನ್ನು ಹಾಕಿ.
*ಈ ಎರಡು ಪದಾರ್ಥಗಳನ್ನು ಎಣ್ಣೆಯೊಂದಿಗೆ 5 ನಿಮಿಷಗಳ ಕಾಲ ಚೆನ್ನಾಗಿ ಉರಿಯಿರಿ. ನಂತರ ಅದಕ್ಕೆ ಖಾರದ ಪುಡಿ, ಸಾಸಿವೆ ಪುಡಿ ಮತ್ತು ಕೊತ್ತಂಬರಿ ಪುಡಿಗಳನ್ನು ಬೆರೆಸಿ. ಈಗ ಎಲ್ಲಾ ಮಸಾಲೆಗಳನ್ನು ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳ ಜೊತೆಗೆ ಚೆನ್ನಾಗಿ ಉರಿಯಿರಿ.
*ಇದಕ್ಕೆ ಅಣಬೆಗಳನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸುತ್ತ ಚೆನ್ನಾಗಿ ಕಲೆಸಿಕೊಡಿ. ನಂತರ ಅಣಬೆಗಳ ಜೊತೆಗೆ ಪೆಪ್ಪರ್ ಪುಡಿಯನ್ನು ಹಾಕಿ, ಚೆನ್ನಾಗಿ ಕಲೆಸಿ ಕೊಡಿ.
*ಈ ಅನ್ನವು ಎಲ್ಲಾ ಪದಾರ್ಥಗಳ ಜೊತೆಗೆ ಸ್ವಲ್ಪ ಬೆರೆಯಲು ಬಾಣಲೆಯಲ್ಲಿಯೇ ಬಿಡಿ. ಅದಕ್ಕಾಗಿ ಒಂದು 10 ನಿಮಿಷ ಬೇಯಿಸಿ. ಇದು ಮುಗಿದ ಮೇಲೆ, ಈ ಪೆಪ್ಪರ್ ಮಶ್ರೂಮ್ ರೈಸ್ ಮೇಲೆ ಉಪ್ಪನ್ನು ಹಾಕಿ. ಈಗ ನಿಮ್ಮ ಮುಂದೆ ಪೆಪ್ಪರ್ ಮಶ್ರೂಮ್ ರೈಸ್ ರೆಸಿಪಿ ತಯಾರಾಗಿದೆ. ಅನ್ನದ ಮೇಲೆ ಬೆಣ್ಣೆಯನ್ನು ಹಾಕಿ, ನಿಮ್ಮ ಪ್ರೀತಿಯ ಆಣ್ಣನಿಗೆ ಸವಿಯಲು ನೀಡಿ.