News Kannada
Thursday, October 06 2022

ಅಡುಗೆ ಮನೆ

ಹಲಸಿನ ಕಾಯಿ ಕಬಾಬ್ - 1 min read

Photo Credit :

ಹಲಸಿನ ಕಾಯಿ ಕಬಾಬ್

ಮಳೆಗಾಲದಲ್ಲಿ ಹಲಸಿನ ಕಾಯಿ ಸೀಸನ್ ಜಾಸ್ತಿ. ಹಲಸಿನ ಕಾಯಿಯಿಂದ ವಿಧ ವಿಧದ ತಿಂಡಿಗಳನ್ನು ತಯಾರಿಸಬಹುದು. ಮಳೆಗಾಲದಲ್ಲಂತು ಅದರ ರುಚಿಯೇ ಬೇರೆ. ಇವತ್ತು ನಾವು ಹಲಸಿನ ಕಾಯಿ ಕಬಾಬ್ ಮಾಡಿ ಸವಿಯೋಣ.

ಬೇಕಾಗುವ ಪದಾರ್ಥಗಳು
ಎಳೆ ಹಲಸಿನ ಕಾಯಿ – 1
ತೊಗರಿ ಬೇಳೆ – ಅರ್ಧ ಬಟ್ಟಲು
ಬೆಳ್ಳುಳ್ಳು – 6 ಎಸಳು
ಚಕ್ಕೆ, ಲವಂಗ – ಸ್ವಲ್ಪ
ಖಾರದ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಶುಂಠಿ – ಸ್ವಲ್ಪ
ಕತ್ತರಿಸಿದ ಈರುಳ್ಳು – ಸ್ವಲ್ಪ
ಅರಿಶಿಣ – ಸ್ವಲ್ಪ

ಮಾಡುವ ವಿಧಾನ:
ಹಲಸಿನ ಕಾಯಿಯ ಮೇಲಿರುವ ಸಿಪ್ಪೆಯನ್ನು ತೆಗೆಯೇಬೇಕು. ಒಳಗೆ ಸಿಕ್ಕಿದ ತಿರುಳನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಬೇಳೆ ಹಾಗೂ ಕತ್ತರಿಸಿ ಹಲಸಿನ ಕಾಯಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬೆಂದ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ 3-5 ನಿಮಿಷ ಬೇಯಿಸಬೇಕು. ನಂತರ ನೀರನ್ನು ಸೋಸಿಕೊಳ್ಳಬೇಕು. ಚೆನ್ನಾಗಿ ಬೆಂದ ಹಲಸಿನಕಾಯಿಗೆ ಶುಂಠಿ, ಬೆಳ್ಳುಳ್ಳಿ ಪೇಟ್, ಚಕ್ಕೆ, ಲವಂಗ ಹಾಕಿ ನೀರು ಹಾಕದಂತೆ ರುಬ್ಬಿಕೊಳ್ಳಬೇಕು. ಇದಕ್ಕೆ ಖಾರದ ಪುಡಿ, ಅರಿಶಿಣದ ಪುಡಿ ಹಾಗೂ ಕತ್ತರಿಸಿದ ಈರುಳ್ಳಿ ಹಾಗಿ ಚೆನ್ನಾಗಿ ಮಿಶ್ರಣ ಮಾಡಬೇಕು. ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ಹಾಗೂ ಸ್ವಲ್ಪ ಅಡುಗೆ ಸೋಡಾ, ನೀರು ಹಾಕೆ ಕಲಸಿಟ್ಟುಕೊಂಡಿರಬೇಕು. ಒಲೆಯ ಮೇಲೆ ಬಾಣಲೆಯೊಂದನ್ನಿಟ್ಟು ಎಣ್ಣೆಯನ್ನು ಚೆನ್ನಾಗಿ ಕಾಯಿಸಬೇಕು. ಎಣ್ಣೆ ಕಾದ ನಂತರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅದನ್ನು ಕಲಸಿಕೊಂಡ ಕಡಲೆಹಿಟ್ಟಿನೊಳಗೆ ಅದ್ದಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ಹಲಸಿನ ಕಾಯಿ ಕಬಾಬ್ ತಯಾರಾಗುತ್ತದೆ.

See also  ರುಚಿಕರವಾದ ಬಸಳೆ ಸೊಪ್ಪಿನ ಬಜ್ಜಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು