News Kannada
Tuesday, October 04 2022

ಅಡುಗೆ ಮನೆ

ಪಾಲಕ್ ಚಪಾತಿ - 1 min read

Photo Credit :

ಬೆಳಗ್ಗಿನ ಉಪಾಹಾರಕ್ಕೆ ಪ್ರತಿ ದಿನ ಒಂದೇ ಬಗೆಯ ತಿಂಡಿಯನ್ನು ತಿನ್ನಲು ಬೋರು.  ದಿನಕ್ಕೊಂದು ಬಗೆಯ ತಿಂಡಿ ತಯಾರಿಸಿ ಸವಿದರೆ ತಿನ್ನಲು ಬಲು ಖುಷಿಯಾಗಿರುತ್ತೆ. ಬನ್ನಿ ನಾವು ಇವತ್ತು ಪಾಲಕ್ ಚಪಾತಿ ಮಾಡೋಣ…
ಅಗತ್ಯವಿರುವ ಸಾಮಾಗ್ರಿಗಳು:
*ಪಾಲಕ್ ಸೊಪ್ಪು : ಇನ್ನೂರು ಗ್ರಾಂ
*ಗೋಧಿ ಹಿಟ್ಟು: ಎರಡು ಕಪ್
*ಬೆಳ್ಳುಳ್ಳಿ: ಮೂರರಿಂದ ನಾಲ್ಕು ಎಸಳು
*ಹಸಿರು ಮೆಣಸು: ನಾಲ್ಕರಿಂದ ಐದು
*ಉಪ್ಪು: ರುಚಿಗನುಸಾರ

ತಯಾರಿಸುವ ವಿಧಾನ: 1) ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಮರಳು ನಿವಾರಿಸಿ. ಸಾಮಾನ್ಯವಾಗಿ ಪಾಲಕ್ ಅನ್ನು ಮರಳಿನಲ್ಲಿ ಬೆಳೆಯುವ ಕಾರಣ ಇದರ ಎಲೆಗಳಲ್ಲಿ ಸೂಕ್ಷ್ಮವಾದ ಮರಳಿನ ಕಣಗಳು ಹುದುಗಿರುತ್ತವೆ. ಆದ್ದರಿಂದ ಪ್ರತಿ ಎಲೆಯನ್ನೂ ಹರಿಯುವ ನೀರಿನಡಿಯಲ್ಲಿ ಬಿಡಿಬಿಡಿಯಾಗಿ ತೊಳೆದು ದಂಟುಗಳನ್ನು ನಿವಾರಿಸಿ ಕುಕ್ಕರಿನಲ್ಲಿ ಎಲೆಗಳು ಮುಳುಗುವಷ್ಟು ಮಾತ್ರ ನೀರು ಹಾಕಿ ಕೊಂಚ ಉಪ್ಪಿನೊಂದಿಗೆ ಎರಡರಿಂದ ಮೂರು ಸೀಟಿ ಬರುವವರೆಗೆ ಬೇಯಿಸಿ. 2) ಬಳಿಕ ನೀರು ಬಸಿದು ಎಲೆಗಳನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ ಇದಕ್ಕೆ ಕೊಂಚ ತಣ್ಣೀರು ಸುರಿಯಿರಿ. 3) ಕೊಂಚ ಹೊತ್ತಿನ ಬಳಿಕ ಈ ನೀರನ್ನೂ ಬಸಿದು ತೆಗೆಯಿರಿ. ಇದರಿಂದ ಹಿಟ್ಟು ನಾದಲು ಎಲೆಗಳು ತಣ್ಣಗಾಗಿ ಸುಲಭವಾಗುತ್ತದೆ. 4) ಈ ಎಲೆಗಳನ್ನು ಮಿಕ್ಸಿಯ ದೊಡ್ಡ ಜಾರಿಗೆ ಹಾಕಿ ಬೆಳ್ಳುಳ್ಳಿ, ಹಸಿಮೆಣಸಿನ ಸಹಿತ ನುಣ್ಣಗೆ ರುಬ್ಬಿ. ನೀರು ಸೇರಿಸಬೇಡಿ. 5) ಇನ್ನೊಂದು ಪಾತ್ರೆಯಲ್ಲಿ ಗೋಧಿಹಿಟ್ಟು ಮತ್ತು ಕೊಂಚ ಉಪ್ಪು ಸೇರಿಸಿ 6) ಈ ಪಾತ್ರೆಗೆ ಕಡೆದ ಪಾಲಕ್ ಎಲೆಗಳನ್ನು ಸೇರಿಸಿ ಚಪಾತಿಯಂತೆಯೇ ನಾದಿ. ಇದು ಸಾಮಾನ್ಯವಾದ ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು. 7) ಬಳಿಕ ಉಂಡೆಗಳಾಗಿಸಿ ಲಟ್ಟಿಸಿ ಚಪಾತಿಯಂತೆಯೇ ಎರಡೂ ಬದಿಗಳನ್ನು ಕಾವಲಿಯ ಮೇಲೆ ಬೇಯಿಸಿ. 8) ಬಿಸಿಬಿಸಿಯಾಗಿದ್ದಂತೆಯೇ ಸವಿಯಲು ನೀಡಿ. ಈ ಚಪಾತಿ ಒಣದಾಗಿದ್ದಾಗಲೂ ರುಚಿಯಾಗಿದ್ದರೂ ಬಿಸಿಯಾಗಿರುವಾಗಲೇ ಚಿಕ್ಕ ಚಮದಷ್ಟು ಬೆಣ್ಣೆ ಅಥವಾ ತುಪ್ಪ ಸವರಿದರೆ ಇನ್ನಷ್ಟು ರುಚಿ ಬರುತ್ತದೆ.

See also  ಮಿಕ್ಸ್ ತರಕಾರಿ ಹುಳಿ ಮಾಡಿ ಸವಿಯಿರಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು