News Kannada
Tuesday, October 04 2022

ಅಡುಗೆ ಮನೆ

ಹೈದರಾಬಾದ್‌ ಹಲೀಮ್‌ - 1 min read

Photo Credit :

ಹೈದರಾಬಾದ್‌ ಹಲೀಮ್‌

ಹಲೀಮ್ ಅಡುಗೆ ಹೈದರಾಬಾದ್ ಕಡೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಈ ಹಲೀಮ್ ಅಡುಗೆಯನ್ನು ಮಟನ್ ಹಾಕಿಯೂ ತಯಾರಿಸಬಹುದು, ಚಿಕನ್ ಹಾಕಿಯೂ ತಯಾರಿಸಬಹುದು. ರಂಜಾನ್ ಹಬ್ಬಕ್ಕೆ ವಿಶೇಷವಾಗಿ ಹೈದರಾಬಾದ್ ಹಲೀಮ್ ತಯಾರಿಸುತ್ತಾರೆ. ನಾವು ಇವತ್ತು ಹೈದರಾಬಾದ್ ಹಲೀಮ್ ತಯಾರಿಸಿ ಸವಿಯೋಣ.

ಬೇಕಾಗುವ ಸಾಮಾಗ್ರಿಗಳು :
* ಬೋನ್‌ಲೆಸ್‌ ಚಿಕನ್‌ 2 ಕೆಜಿ
* ಕೆಂಪು ಮೆಣಸಿನ ಪುಡಿ 1 ಚಮಚ
* ಹಳದಿ ಪುಡಿ 1 ಚಮಚ
* ಚಕ್ಕೆ 2
* ಬೆಳ್ಳುಳ್ಳಿ- ಶುಂಠಿ ಪೇಸ್ಟ್‌
 * 1/2 ಚಮಚ
* ಧನಿಯಾ ಪುಡಿ 1/4 ಚಮಚ
* ಈರುಳ್ಳಿ 2
* ತೊಗರಿ ಬೇಳೆ 250 ಗ್ರಾಂ
* ಗೋಧಿ 200 ಗ್ರಾಂ
* ಎಣ್ಣೆ
* ಉಪ್ಪು ರುಚಿಗೆ ತಕ್ಕಷ್ಟು

ಗಾರ್ನಿಶ್‌ ಮಾಡಲು
* ಈರುಳ್ಳಿ
* ನಿಂಬೆ ಸ್ಲೈಸ್‌
* ಹಸಿ ಮೆಣಸು
* ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ :
ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಅದು ಕಾದ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಪಡಿ ಮಾಡಿ ಇಡಿ. ಈಗ ಇನ್ನೊಂದು ಪಾತ್ರೆ ತೆಗೆದುಕೊಂಡು ಅದರಲ್ಲಿ 6 ಕಪ್ ನೀರು ಹಾಕಿ ಹಾಗೂ ತೊಳೆದ ಗೋಧಿ ಮತ್ತು ಬೇಳೆಯನ್ನು ಹಾಕಿ ಅರ್ಧ ಗಂಟೆ ಬೇಯಿಸಿ. ಬೇಯಿಸಿದ ಬೇಳೆ ಮತ್ತು ಗೋಧಿಯನ್ನು ಮಿಕ್ಸಿ ಮಾಡಿ ಪಕ್ಕಕ್ಕಿಡಿ. ಈಗ ಒಂದು ದೊಡ್ಡ ಪ್ಯಾನ್‌ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ  ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು, ಪಲಾವ್ ಎಲೆ, ಹಾಕಿ 1 ಒಂದು ನಿಮಿಷ ಸೌಟ್ ನಿಂದ ಅಡಿಸಿ ಅರ್ಧ ಕಪ್ ನೀರು ಹಾಕಿ 2 ನಿಮಿಷ ಕುದಿಸಬೇಕು. ಈಗ ಕ್ಲೀನ್‌ ಮಾಡಿದ ಬೋನ್ ಲೆಸ್ ಚಿಕನ್ ಮತ್ತು ಅರೆದ ಬೇಳೆ ಮತ್ತು ಗೋಧಿ ಹಾಕಿ. ನಂತರ ಎಣ್ಣೆ ಹಾಕಿ ಹಾಕಿ ಬೇಯಿಸಿ ಆಗಾಗ ಸೌಟ್ ನಿಂದ ಮಿಶ್ರಣವನ್ನು ಆಡಿಸುತ್ತಾ ಈ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಬೇಕು. ಈಗ ತಯಾರಾದ ಹಲೀಮ್‌ನ್ನು ಇಳಿಸಿ ಅದನ್ನು ನಿಂಬೆ ಸ್ಲೈಸ್‌‌, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಟೇಸ್ಟಿಯಾದ ಹಲೀಮ್‌ ಸವಿಯಲು ರೆಡಿಯಾಗುತ್ತದೆ. 

See also  ಬಾದಾಮ್‌ ಶೊರಬಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು