ಬೇಕಾದ ಪದಾರ್ಥಗಳು :1/2ಕಪ್ ಸಕ್ಕರೆ
1/2ಕಪ್ ಖೋವಾ
4ಟಿ ಸ್ಪೂನ್ ಮಂದನೆಯ ಹಾಲು
1/2ಕಪ್ ಕೊಬ್ಬರಿ
2ಟಿ ಸ್ಪೂನ್ ತುಪ್ಪ
ತಯಾರಿಸುವ ವಿಧಾನ :
ಮೊದಲಿಗೆ ಪ್ಯಾನ್ ಇಟ್ಟುಕೊಂಡು ಅದರಲ್ಲಿ ಸ್ವಲ್ಪ ಕೊಬ್ಬರಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಕೊಬ್ಬರಿಯನ್ನು ಒಂದು ಬೌಲ್‌ನಲ್ಲಿ ಹಾಕಿ ಪಕ್ಕಕ್ಕಿಟ್ಟುಕೊಳ್ಳಿ. ಮತ್ತೊಂದು ಪ್ಯಾನ್‌ನಲ್ಲಿ ಸ್ವಲ್ಪ ತುಪ್ಪ, ಒಂದಿಷ್ಟು ಖೋವಾ ಹಾಕಿ ಲೈಟ್ ಆಗಿ ರೋಸ್ಟ್ ಮಾಡಿಕೊಳ್ಳಿ. ಇದು ಚೆನ್ನಾಗಿ ರೋಸ್ಟ್ ಆದಮೇಲೆ ಇದರಲ್ಲಿ ಮಂದನೆಯ ಹಾಲು, ಒಂದಿಷ್ಟು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚೆನ್ನಾಗಿ ಬೇಯಿಸಿ. ಹೀಗೆ ಚೆನ್ನಾಗಿ ಬೇಯಿಸಿ ಮಿಕ್ಸ್‌ನ್ನು ಒಂದು ಪ್ಲೇಟ್‌ನಲ್ಲಿ ತೆಗೆದುಕೊಂಡು ತಣ್ಣಗಾಗುವವರೆಗೂ ತಡೆದು ನಂತರ ದುಂಡಾಕಾರವಾಗಿ ಮಾಡಿಕೊಂಡು ಕೊಬ್ಬರಿಯಲ್ಲಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟೆ ಮಾಡಿದರೆ ರುಚಿರುಚಿಯಾದ ಖೋವಾ ಕೊಬ್ಬರಿ ಪೇಡಾ ರೆಡಿ.