News Kannada
Sunday, September 25 2022

ಅಡುಗೆ ಮನೆ

ಬದನೆಕಾಯಿ ಗೊಜ್ಜು - 1 min read

Photo Credit :

ಬದನೆಕಾಯಿ ಗೊಜ್ಜು

ಬೇಕಾಗುವ ಸಾಮಾಗ್ರಿಗಳು :
ಬದನೆಕಾಯಿ 1 (ದೊಡ್ಡದು)
ಹಸಿ ಮೆಣಸಿನಕಾಯಿ2-4
ಈರುಳ್ಳಿ -1
ಸಾಸಿವೆ – 1/2 ಕಪ್‌
ಇಂಗು  ಚಿಟಿಕೆ
ಕರಿಬೇವಿನ ಎಲೆಗಳು 5 – 6
ಎಣ್ಣೆ 2 ಟೀ ಸ್ಪೂನ್‌‌

ತಯಾರಿಸುವ ವಿಧಾನ : ಬದನೆಕಾಯಿಗೆ ಒಂದು ಟೀ ಸ್ಪೂನ್‌ ಎಣ್ಣೆಯನ್ನು ಸವರಿ ಫೋರ್ಕ್‌(ಮುಳ್ಳು ಚಮಚ) ಅಥವಾ ಹರಿತವಾದ ಚಾಕುವಿನಿಂದ ಸುತ್ತ ಚುಚ್ಚಿ.  ಓವನ್‌ನ ಟ್ರೇ ಒಳಗೆ ಒಂದು ಅಲ್ಯುಮಿನಿಯಂ ಹಾಳೆಯನ್ನು ಹಾಸಿ ಅದರೊಳಗೆ ಎಣ್ಣೆ ಸವರಿದ ಬದನೆಕಾಯಿಯನ್ನು ಇಟ್ಟು,  500-600 ಡಿಗ್ರಿ ಫ್ಯಾರನ್‌ ಹೀಟ್‌‌ನಲ್ಲಿ 30 ರಿಂದ 40 ನಿಮಿಷದವರೆಗೂ ಬೇಕ್‌ ಮಾಡಲು ಇಡಿ. (ಒಂದು ವೇಳೆ ಓವನ್‌ ಇಲ್ಲದವರು ಕೆಂಡದಲ್ಲಿ ಅಥವಾ ಗ್ಯಾಸ್‌ ಸ್ಟೌವ್‌‌ನಲ್ಲೇ ಕಡಿಮೆ ಉರಿಯಲ್ಲೇ ಬದನೇ ಕಾಯಿ ಸೀದು ಹೋಗದಂತೆ ಬೇಯಿಸಬಹುದು) ಒಂದು ಪಾತ್ರೆಗೆ ಹುಣಿಸೆ ಹಣ್ಣನ್ನು ಹಾಕಿ ನೀರಿನಲ್ಲಿ 2 ನಿಮಿಷದವರೆಗೆ ನೆನೆಯಿಟ್ಟು ನಂತರ ಅದನ್ನು ಕಿವುಚಿ.
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ಎರಡನ್ನೂ ಬದಿಗಿರಿಸಿಕೊಳ್ಳಿ. ಬೇಕ್‌ ಆದ ಬದನೆಕಾಯಿಯನ್ನು ಹೊರತೆಗೆದು ತಣ್ಣಗಾದ ನಂತರ ಮೇಲಿನ ಸಿಪ್ಪೆಯನ್ನು ತೆಗೆದುಹಾಕಿ. ಸಣ್ಣ ಚೂರುಗಳನ್ನಾಗಿ ಮಾಡಿಕೊಂಡು ಬೇರೆ ಪಾತ್ರೆಗೆ ಹಾಕಿ ಅದರೊಂದಿಗೆ, ಸೋಸಿಕೊಂಡ ಹುಣಿಸೆ ನೀರು, ಉಪ್ಪು, ಸಣ್ಣಗೆ ಕತ್ತರಿಸಿಕೊಂಡ ಮೆಣಸಿನಕಾಯನ್ನು ಹಾಕಿ ಎಲ್ಲವನ್ನೂ ಸ್ಪೂನ್‌ ಸಹಾಯದಿಂದ ಕಲಿಸಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ ಸಿಡಿದ ನಂತರ ಇಂಗು, ಕರಿಬೇವಿನ ಎಲೆಹಾಕಿ ಬಡಿಸಿಕೊಳ್ಳಿ ಅದರೊಳಗೆ ಬದನೆಕಾಯಿ ಮಿಶ್ರಣವನ್ನು ಹಾಕಿ ಬೆರೆಸಿದರೆ ರುಚಿಯಾದ ಬದನೆಕಾಯಿ ಖಾರಗೊಜ್ಜು ಸಿದ್ಧ.

See also  ಸಿಂಪಲ್ ಆಗಿ ಮಾಡಿ ಮಾವಿನಕಾಯಿ ತಂಬುಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು