News Kannada
Tuesday, September 27 2022

ಅಡುಗೆ ಮನೆ

ಅವಲಕ್ಕಿ ದೋಸೆ - 1 min read

Photo Credit :

ಅವಲಕ್ಕಿ ದೋಸೆ

ಕಡಿಮೆ ಕ್ಯಾಲೋರಿಯುಕ್ತ ಮತ್ತು ಗರಿಗರಿಯಾಗಿರುವ ಈ ದೋಸೆ ರೆಸಿಪಿ ನಿಮ್ಮ ಬೆಳಗಿನ ತಿಂಡಿಯನ್ನು ರುಚಿಕರವನ್ನಾಗಿಸುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಅವಲಕ್ಕಿಯೊಂದಿಗೆ ಅಕ್ಕಿ, ಮಜ್ಜಿಗೆ ಹೀಗೆ ನಿಮ್ಮ ಪೌಷ್ಟಿಕತೆಗೆ ಮತ್ತು ದೈಹಿಕ ಸ್ವಾಸ್ಥ್ಯಕ್ಕೆ ಅತೀ ಅಗತ್ಯವಾಗಿರುವ ಸಾಮಾಗ್ರಿಗಳನ್ನು ಮಿಶ್ರ ಮಾಡಿ ಈ ದೋಸೆಯನ್ನು ತಯಾರಿಸಲಾಗುತ್ತದೆ. ನಾವು ಇವತ್ತು ಅವಲಕ್ಕಿಯಿಂದ ಸ್ಪೇಷಲ್ ದೋಸೆ ತಯಾರಿಸಿ ಸವಿಯೋಣ
ಬೇಕಾಗುವ ಸಾಮಾಗ್ರಿಗಳು
*ಅಕ್ಕಿ – 1 1/2 ಕಪ್
*ಕುಚ್ಚುಲಕ್ಕಿ (ಕೆಂಪು ಅಕ್ಕಿ)
*ಅವಲಕ್ಕಿ – 1 ಕಪ್
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ/ತುಪ್ಪ – ಸ್ವಲ್ಪ

ತಯಾರಿಸು ವಿಧಾನ:  ಮೊದಲಿಗೆ ಅಕ್ಕಿಯನ್ನು 7-8 ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಸಾಕಷ್ಟು ನೀರು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಅವಲಕ್ಕಿ, ಮೊಸರು/ಮಜ್ಜಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಸಾಕಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಹಿಟ್ಟು ಮಜ್ಜಿಗೆಯಂತೆ ದಪ್ಪಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ತವಾವನ್ನು ಬಿಸಿ ಮಾಡಿಕೊಳ್ಳಿ. ಮಧ್ಯಭಾಗಕ್ಕೆ ಒಂದು ಕೈಲಿನಷ್ಟು (ದೋಸೆ ಚಮಚದಷ್ಟು) ಹಿಟ್ಟನ್ನು ಸುರುವಿಕೊಳ್ಳಿ ಮತ್ತು ಕೈಲಿನ ಹಿಂಭಾಗದಿಂದ ದೋಸೆಯನ್ನು ವೃತ್ತಾಕಾರವಾಗಿ ಹುಯ್ಯಿರಿ. ಇದಕ್ಕೆ ಮುಚ್ಚಳವನ್ನು ಮುಚ್ಚಿ ಮತ್ತು ದೋಸೆಯ ಎರಡೂ ಭಾಗ ಬೇಯುವುದಕ್ಕಾಗಿ 1 ನಿಮಿಷ ಹಾಗೆಯೇ ಬಿಡಿ. ನಂತರ ದೋಸೆಯನ್ನು ತಟ್ಟೆಗೆ ವರ್ಗಾಯಿಸಿ. ರುಚಿಯಾದ ಅವಲಕ್ಕಿ ದೋಸೆ ಸವಿಯಲು ಸಿದ್ಧ.  ಈ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಕೂಡ ನೀವು ಸೇವಿಸಬಹುದು.

See also  ತಿನಿಸು ಪ್ರಿಯರ ನೆಚ್ಚಿನ ತಿಂಡಿ ಆಲೂಗೆಡ್ಡೆ ಬೋಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು