ಬೇಕಾಗುವ ಸಾಮಾಗ್ರಿಗಳು :
ಗಸಗಸೆ 1/2 ಕಪ್ಕೊಬ್ಬರಿ ತುರಿ 1/2 ಕಪ್
ಬೆಲ್ಲ 1 ಅಚ್ಚು
ಗೋಡಂಬಿ
ದ್ರಾಕ್ಷಿ
ಅಕ್ಕಿ 2 ಚಮಚ
ಹಾಲು 1 ಕಪ್
ಏಲಕ್ಕಿ ಪುಡಿ
ತುಪ್ಪ 2 ಚಮಚ
ತಯಾರಿಸುವ ವಿಧಾನ:
ಮೊದಲು ಗಸಗಸೆಯನ್ನು ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಕೊಬ್ಬರಿ ತುರಿ, ಅಕ್ಕಿ ಮತ್ತು ಏಲಕ್ಕಿಯನ್ನು ಗಸಗಸೆ ಜತೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ ಅದಕ್ಕೆ ಬೆಲ್ಲದ ಪುಡಿ ಮತ್ತು ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಅದಕ್ಕೆ ಹಾಲು ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಗೋಡಂಬಿ ಮತ್ತು ದ್ರಾಕ್ಷೆಯನ್ನು ತುಪ್ಪ ಹಾಕಿ ಹುರಿದುಕೊಂಡು ಪಾಯಸಕ್ಕೆ ಹಾಕಿ ಮಕ್ಕಳಿಗೆ ಸರ್ವ್ ಮಾಡಿ. ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.