News Kannada
Friday, October 07 2022

ಅಡುಗೆ ಮನೆ

ಮಟನ್ ಪೆಪ್ಪರ್ ಫ್ರೈ - 1 min read

Photo Credit :

ಮಟನ್ ಪೆಪ್ಪರ್ ಫ್ರೈ

ಮಾಂಸಪ್ರಿಯರಿಗೆ ಹೆಚ್ಚಿನವರಿಗೆ ಮಟನ್ ಮಾಂಸದಿಂದ ತಯಾರಿಸಿದ ಫುಡ್ ಅಂದರೆ ಇಷ್ಟಪಡುತ್ತಾರೆ. ಅದರಲ್ಲೂ ಆಂಧ್ರ ಶೈಲಿಯ ಮಟನ್ ಪೆಪ್ಪರ್ ಫ್ರೈ ಅಂದಾಕ್ಷಣ ಬಾಯಲ್ಲಿ ನೀರೂರಿಯುತ್ತೆ. ನಾವು ಇವತ್ತು ಮಟನ್ ಪೆಪ್ಪರ್ ಫ್ರೈ ತಯಾರಿಸಿ ಸವಿಯೋಣ.
ಸಾಮಾಗ್ರಿಗಳು:
*ಮಟನ್ – 500 ಗ್ರಾಮ್
*ಅರಶಿನ – 1/2 ಸ್ಪೂನ್
*ಈರುಳ್ಳಿ – 3 (ಕತ್ತರಿಸಿದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಸ್ಪೂನ್
*ಟೊಮೇಟೊ – 2 (ಕತ್ತರಿಸಿದ್ದು)
*ಮೆಣಸಿನ ಹುಡಿ – 1 ಸ್ಪೂನ್
*ಕರಿಮೆಣಸಿನ ಹುಡಿ – 2 ಸ್ಪೂನ್
*ಕರಿಬೇವು – 6-7 ಎಸಳು
*ಕೊತ್ತಂಬರಿ ಸೊಪ್ಪು – 2 ಎಸಳು (ಕತ್ತರಿಸಿದ್ದು)
*ಫೆನಲ್ ಬೀಜಗಳು – 1/2 ಸ್ಪೂನ್
*ಪೆಪ್ಪರ್ ಕೋರ್ನ್ಸ್ – 1 ಸ್ಪೂನ್
*ಪೂಪ್ಪಿ ಸೀಡ್ಸ್ – 1/2 ಸ್ಪೂನ್
*ಜೀರಿಗೆ – 1 ಸ್ಪೂನ್
*ದಾಲ್ಚೀನಿ – 1 ಇಂಚು
*ಲವಂಗ – 2-4
*ಏಲಕ್ಕಿ – 2
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – 3 ಸ್ಪೂನ್
ಮಾಡುವ ವಿಧಾನ:
ಮಟನ್ ಅನ್ನು ಅರಶಿನ ಉಪ್ಪು ಹಾಗೂ 3 ಕಪ್ನಷ್ಟು ನೀರು ಸೇರಿಸಿ 15 ನಿಮಿಷಗಳ ಕಾಲ ಮಂದ ಉರಿಯಲ್ಲಿ ಬೇಯಿಸಿ. ಗ್ಯಾಸ್ನಲ್ಲಿ ಫ್ಲಾಟ್ ಪ್ಯಾನ್ ಇಡಿ ಇದಕ್ಕೆ ಎಣ್ಣೆ ಹಾಕಿ ಮತ್ತು ಎಣ್ಣೆ ಬಿಸಿಯಾದೊಡನೆ ಫೆನ್ನಲ್ ಬೀಜಗಳು, ಜೀರಿಗೆ, ಪೂಪ್ಪಿ ಸೀಡ್ಸ್, ಪೆಪ್ಪರ್ ಕೋರ್ನ್ಸ್, ಲವಂಗ ಮತ್ತು ಏಲಕ್ಕಿಯನ್ನು ಫ್ರೈ ಮಾಡಿ. ನಂತರ ಅವುಗಳನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಪ್ಯಾನ್ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮತ್ತು ಕರಿಬೇವಿನೆಸಳಿನಿಂದ ಒಗ್ಗರಣೆ ನೀಡಿ. ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವಂತೆ ಹುರಿದುಕೊಳ್ಳಿ.  ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಬೇಯಿಸಿ. ಬೇಯಿಸಿದ ಮಟನ್ ತುಂಡುಗಳನ್ನು ಸೇರಿಸಿ ಮತ್ತು ಅದರ ರಸ ಬರುವವರೆಗೆ ಹುರಿಯಿರಿ. ಈಗ ಟೊಮೇಟೊ, ಮೆಣಸಿನ ಹುಡಿ ಮತ್ತು ಹುಡಿ ಮಾಡಿದ ಮಸಾಲೆಯನ್ನು ಸೇರಿಸಿ.ಮಸಾಲಾ ಚೆನ್ನಾಗಿ ಮಟನ್ನೊಂದಿಗೆ ಕವರ್ ಆಗಿರುವಂತೆ ನೋಡಿಕೊಳ್ಳಿ. ಕಾಳುಮೆಣಸಿನ ಹುಡಿಯನ್ನು ಮೇಲ್ಭಾಗಕ್ಕೆ ಚಿಮುಕಿಸಿ ಮತ್ತು 2 ರಿಂದ 3 ನಿಮಿಷಗಳ ಕಾಲ ಬೇಯಿಸಿ ಕೊನೆಗೆ ನೀವು ಮಟನ್ ಪೆಪ್ಪರ್ ಫ್ರೈ ಅನ್ನು ಆನಿಯನ್ ರಿಂಗ್, ಹಸಿಮೆಣಸು ಮತ್ತು ಕೊತ್ತಂಬರಿ ಎಲೆಯೊಂದಿಗೆ ಅಲಂಕರಿಸಬಹುದು.

See also  ಸಿಹಿ ಕುಂಬಳಕಾಯಿ ಹಲ್ವಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು