ಆಲೂಗಡ್ಡೆಯಿಂದ ಮಾಡಿದ ಪರೋಟವನ್ನುಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ಎಗ್ ಪರೋಡ ನಿಮಗೆ ತಿಳಿದಿದೆಯಾ? ಬನ್ನಿ ಇವತ್ತು ನಾವು ಸ್ಪೇಷಲ್ ಎಗ್ ಪರೋಟ ತಯಾರಿಸೋಣ.
ಬೇಕಾಗುವ ಸಾಮಗ್ರಿಗಳು ಗೋಧಿ ಹಿಟ್ಟು – 2 ಕಪ್
ಈರುಳ್ಳಿ – 2
ಮೊಟ್ಟೆ – 4
ಕೊತ್ತಂಬರಿ ಸೊಪ್ಪು – 1 ಕಪ್
ಕ್ಯಾಪ್ಸಿಕಮ್ – 1 ಕಪ್
ಎಣ್ಣೆ – 2 tbsp.
ಹಸಿಮೆಣಸಿನ ಕಾಯಿ – 3
ಪೆಪ್ಪರ್ ಪೌಡರ್ – 1/2 tsp.
ಅರಿಶಿನ – 1/2 tsp.
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ದೊಡ್ಡ ಬೌಲ್ನಲ್ಲಿ ಗೋಧಿಹಿಟ್ಟು, ಉಪ್ಪು, ಸ್ವಲ್ಪ ಎಣ್ಣೆ ಬೆರೆಸಿ ಚಪಾತಿ ಹಿಟ್ಟು ತಯಾರಿಸಿಕೊಳ್ಳಿ. ಹಿಟ್ಟಿನಿಂದ ಪರೋಟ ಒತ್ತಿಕೊಂಡು ಪ್ಯಾನ್ನಲ್ಲಿ ಎಣ್ಣೆ ಸವರಿ ಲೈಟ್ ಆಗಿ ಎರಡೂ ಕಡೆ ಫ್ರೈ ಮಾಡಿ ಒಂದು ಪ್ಲೇಟ್ನಲ್ಲಿಟ್ಟುಕೊಳ್ಳಿ. ಬೌಲ್ನಲ್ಲಿ ಮೊಟ್ಟೆಯನ್ನು ಬೀಟ್ ಮಾಡಿ ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಕ್ಯಾಪ್ಸಿಕಮ್, ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಅರಿಶಿನ , ಉಪ್ಪು, ಪೆಪ್ಪರ್ ಪೌಡರ್ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ತವಾದಲ್ಲಿ ಎಣ್ಣೆ ಸವರಿ ಮೊಟ್ಟೆ ಮಿಶ್ರಣ ಹರಡಿ, ಚಪಾತಿಯನ್ನು ಆಮ್ಲೆಟ್ನ ಮೇಲ್ಭಾಗ ಇಟ್ಟು ನಿಧಾನವಾಗಿ ಪ್ರೆಸ್ ಮಾಡಿ ನಂತರ ಫೋಲ್ಡ್ ಮಾಡಿ ಸರ್ವಿಂಗ್ ಪ್ಲೇಟ್ನಲ್ಲಿಡಿ. ಮೊಟ್ಟೆಯಲ್ಲಿ ಪ್ರೋಟೀನ್ ಹಾಗೂ ಗೋಧಿಯಲ್ಲಿ ಕಾರ್ಬೋಹೈಡ್ರೇಟ್ ಅಂಶ ಇದ್ದು, ಈ ಎಗ್ ಪರೋಟವನ್ನು ಮಕ್ಕಳಿಗೆ ಬ್ರೇಕ್ಫಾಸ್ಟ್ ಅಥವಾ ಸ್ನ್ಯಾಕ್ಸ್ಗೆ ನೀಡಬಹುದು.