ಕೋಳಿ ಮಾಂಸ ಯಾರಿಗೆ ಇಷ್ಟ ಇಷ್ಟ ಇಲ್ಲ ಹೇಳಿ… ಚಿಕನ್ ಅಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರಿಯುತ್ತೆ. ಬನ್ನಿ ಇವತ್ತು ನಾವು ನಾನ್ ವೆಜ್ ಸ್ಪೇಷಲ್ ಚಿಕನ್ ಮಂಚೂರಿಯನ್ ಮಾಡಿ ಬಾಯಿ ರುಚಿ ಹೆಚ್ಚಿಸೋಣ.
ಬೇಕಾಗುವ ಸಾಮಗ್ರಿಗಳುಬೋನ್ಲೆಸ್ ಚಿಕನ್ – 300 ಗ್ರಾಂ
ಕಾರ್ನ್ಫ್ಲೋರ್ – 1 1/2 ಕಪ್
ಮೊಟ್ಟೆ – 1
ಮೈದಾಹಿಟ್ಟು – 1/2 ಕಪ್
ಸೋಯಾಸಾಸ್ – 1 tbsp.
ವಿನಿಗರ್ – 2 tbsp.
ಚಿಲ್ಲಿ ಸಾಸ್ – 2 tbsp.
ಚಿಕನ್ ಸ್ಟಾಕ್ – 2 ಕಪ್
ಸ್ಪ್ರಿಂಗ್ ಆನಿಯನ್ಸ್ – 1 ಕಪ್
ಟೊಮ್ಯಾಟೋ ಸಾಸ್ – 1 tbsp.
ಸಕ್ಕರೆ – 1 tsp.
ಸಣ್ಣಗೆ ಹೆಚ್ಚಿಕೊಂಡ ಬೆಳ್ಳುಳ್ಳಿ – 1 tbsp.
ಸಣ್ಣಗೆ ಹೆಚ್ಚಿಕೊಂಡ ಶುಂಠಿ – 1 tbsp.
ಹಸಿಮೆಣಸಿನ ಕಾಯಿ – 2
ಪೆಪ್ಪರ್ ಪೌಡರ್ – 1 tsp.
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಒಂದು ಬೌಲ್ನಲ್ಲಿ ಚಿಕನ್, ಮೊಟ್ಟೆ, ಸ್ವಲ್ಪ ರೆಡ್ ಚಿಲ್ಲಿ ಸಾಸ್, ಸೋಯಾಸಾಸ್, ಪೆಪ್ಪರ್ ಪೌಡರ್, ಉಪ್ಪು, ಮೈದಾಹಿಟ್ಟು, ಕಾರ್ನ್ಫ್ಲೋರ್ ಎಲ್ಲವನ್ನೂ ಸೇರಿಸಿ 15 ನಿಮಿಷ ಮ್ಯಾರಿನೇಟ್ ಆಗಲು ಬಿಡಿ. ನಂತರ ಚಿಕನ್ಅನ್ನು ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿಕೊಳ್ಳಿ. ಮತ್ತೊಂದು ಪ್ಯಾನ್ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಬೆಳ್ಳುಳ್ಳಿ, ಸ್ಪ್ರಿಂಗ್ ಆನಿಯನ್ಸ್ ಸೇರಿಸಿ 2 ನಿಮಿಷ ಹುರಿದುಕೊಳ್ಳಿ. ಇದರೊಂದಿಗೆ ಹಸಿಮೆಣಸಿನ ಕಾಯಿ, ಶುಂಠಿ, ಟೊಮ್ಯಾಟೋ ಕೆಚಪ್, ರೆಡ್ ಚಿಲ್ಲಿ ಸಾಸ್, ಸೋಯಾಸಾಸ್, ಪೆಪ್ಪರ್ ಪೌಡರ್, ವಿನಿಗರ್, ಸಕ್ಕರೆ, ಉಪ್ಪು ಎಲ್ಲವನ್ನೂ ಸೇರಿಸಿ ಬಿಡದೆ ತಿರುವಿ. ಕಾರ್ನ್ಫ್ಲೋರ್ಗೆ ಸ್ವಲ್ಪ ಚಿಕನ್ ಸ್ಟಾಕ್ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಉಳಿದ ಚಿಕನ್ ಸ್ಟಾಕ್ಅನ್ನು ಸಾಸ್ನೊಂದಿಗೆ ಬೆರೆಸಿ. 3 ನಿಮಿಷದ ನಂತರ ಚಿಕನ್ ಸ್ಟಾಕ್ನೊಂದಿಗೆ ಮಿಕ್ಸ್ ಮಾಡಿಕೊಂಡ ಕಾರ್ನ್ಫ್ಲೋರ್ ಪೇಸ್ಟ್ ಸೇರಿಸಿ ತಿರುವಿ . ಮಿಶ್ರಣ ಗಟ್ಟಿಯಾದಾಗ ಎಣ್ಣೆಯಲ್ಲಿ ಫ್ರೈ ಮಾಡಿಕೊಂಡ ಚಿಕನ್ ಸೇರಿಸಿ 5 ನಿಮಿಷ ತಿರುವಿ. ಸರ್ವಿಂಗ್ ಬೌಲ್ಗೆ ವರ್ಗಾಯಿಸಿ ಸ್ಪ್ರಿಂಗ್ ಆನಿಯನ್ನಿಂದ ಗಾರ್ನಿಶ್ ಮಾಡಿ ಸರ್ವ್ ಮಾಡಿ. ಚಿಕನ್ ಮಂಚೂರಿಯನ್ಅನ್ನು ನೀವು ಅನ್ನ, ಚಪಾತಿ, ರೊಟ್ಟಿ, ದೋಸೆಯೊಂದಿಗೆ ಅಥವಾ ಹಾಗೆ ತಿನ್ನಬಹುದು.