ನುಗ್ಗೆಕಾಯಿಯನ್ನು ಚಳಿಗಾಲದಲ್ಲಿ ಸೇವಿಸುವುದು ತುಂಬಾ ಒಳ್ಳೆಯದು. ಶೀತ ಹಾಗೂ ಜ್ವರವನ್ನು ತಡೆಗಟ್ಟುವ ಅಂಶ ನಗ್ಗೆಕಾಯಿಯಲ್ಲಿದೆ. ಹೆಚ್ಚಾಗಿ ಇದನ್ನು ತಿಂದರೆ ಸ್ಕಿನ್ ಗೆ ಹೊಳಪು ಬರುತ್ತದೆ. ನಾನ್ ವೆಜ್ ಇಷ್ಟಪಡುವವರು ನುಗ್ಗೆಕಾಯಿಯಿಂದ ತಯಾರಿಸಿದ ಸೋಯಾ ಕೀಮಾ ಡ್ರಮ್ ಸ್ಟಿಕ್ ಫ್ರೈ ಯನ್ನು ಖಂಡಿತಾ ಇಷ್ಟಪಡುತ್ತೀರಿ.
ಬೇಕಾಗುವ ಸಾಮಾಗ್ರಿಗಳು:
ನುಗ್ಗೆಕಾಯಿ – ನಾಲ್ಕು
ಹೆಚ್ಚಿಕೊಂಡ ಈರುಳ್ಳಿ – ಒಂದು ಕಪ್
ಹಸಿಮೆಣಸಿನಕಾಯಿ – ನಾಲ್ಕು
ಜೀರಿಗೆ – ಒಂದು ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದು ಚಮಚ
ಅರಿಶಿನ – ಅರ್ಧ ಚಮಚ
ಗರಂ ಮಸಾಲ – ಒಂದು ಚಮಚ
ಸೋಯಾಚಂಕ್ಸ್ – ಒಂದು ಕಪ್
ರೆಡ್ ಚಿಲ್ಲಿ ಪೌಡರ್ – ಎರಡು ಚಮಚ
ಹೆಚ್ಚಿಕೊಂಡ ಟೊಮ್ಯಾಟೋ – ಅರ್ಧ ಕಪ್
ಸಾಸಿವೆ – ಒಂದು ಚಮಚ
ಎಣ್ಣೆ – ಅರ್ಧ ಕಪ್
ಕರಿಬೇವು ಎಸಳು –ಎರಡು
ಉಪ್ಪು –ರುಚಿಗೆ
ಮಾಡುವ ವಿಧಾನ :
ಮೊದಲಿಗೆ ನುಗ್ಗೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು ಸ್ವಲ್ಪ ಉಪ್ಪು ಹಾಗೂ ಅರಿಶಿನ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಸೋಯಾಚಂಕ್ಸ್ ಅನ್ನು ಬಿಸಿನೀರಿನಲ್ಲಿ ಎರಡು ನಿಮಿಷ ನೆನೆಸಿ ನಂತರ ಹೊರತೆಗೆದು ಮ್ಯಾಶ್ ಮಾಡಿಕೊಳ್ಳಿ. ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಸಾಸಿವೆ, ಜೀರಿಗೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಈರುಳ್ಳಿ, ಕರಿಬೇವು, ಉಪ್ಪು, ಟೊಮ್ಯಾಟೋ ಸೇರಿಸಿ ಹುರಿದು ಮುಚ್ಚಳ ಮುಚ್ಚಿ ಬೇಯಲು ಬಿಡಿ. ನಂತರ ಇದರೊಂದಿಗೆ ಸೋಯಾಚಂಕ್ಸ್, ರೆಡ್ ಚಿಲ್ಲಿ ಪೌಡರ್, ನುಗ್ಗೆಕಾಯಿ, ಗರಂ ಮಸಾಲ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮೂರು ನಿಮಿಷ ಹುರಿದು ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಲು ಬಿಡಿ. ಅದು ಬೆಂದ ನಂತರ ಮುಚ್ಚಳ ತೆಗೆದು ಪ್ಲೇಟ್ ಗೆ ಸರ್ವ್ ಮಾಡಿ. ಈಗ ರುಚಿಯಾದ ಸೋಯಾ ಕೀಮಾ ಡ್ರಮ್ ಸ್ಟಿಕ್ ಫ್ರೈ ತಿನ್ನಲು ರೆಡಿ.