News Kannada
Sunday, September 25 2022

ಅಡುಗೆ ಮನೆ

ಸಿಗಡಿಯ ಈ ಖಾದ್ಯ ನಿಮಗೆ ಇಷ್ಟವಾಗದೆ ಇರದು - 1 min read

Photo Credit :

ಸಿಗಡಿಯ ಈ ಖಾದ್ಯ ನಿಮಗೆ ಇಷ್ಟವಾಗದೆ ಇರದು

ಕರಾವಳಿ ಭಾಗದ ಜನತೆಗೆ ಮೀನಿನ ಪದಾರ್ಥಗಳು ಇಷ್ಟವಿಲ್ಲವೆಂದು ಹೇಳಲು ಸಾಧ್ಯವೇ ಇಲ್ಲ. ಮೀನಿನ ಖಾದ್ಯಗಳು ಕರಾವಳಿ ಭಾಗದಲ್ಲಿ ವಿವಿಧ ರೀತಿಯಲ್ಲಿ ತಯಾರಿಸುವರು. ಇದು ಕರಾವಳಿ ಮಾತ್ರವಲ್ಲದೆ ವಿಶ್ವದೆಲ್ಲೆಡೆಯಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ಸಿಗಡಿಯಿಂದ ತಯಾರಿಸುವ ವಿಶೇಷ ಖಾದ್ಯ ವಿಶ್ವ ಆಹಾರ ದಿನ(ಅ.16)ದ ಅಂಗವಾಗಿ ನಿಮಗಾಗಿ…. 

ಬೆಳ್ಳುಳ್ಳಿ ಸಿಗಡಿ(ಗಾರ್ಲಿಕ್ ಪ್ರಾನ್ಸ್) ಮಾಡಲು ಬೇಕಾಗುವ ಸಾಮಗ್ರಿಗಳು
1 ಕೆಜಿ ಸಿಗಡಿ(ಸಿಪ್ಪೆ ತೆಗೆದಿರುವುದು, ಬಾಲ ಹಾಗೆ ಇರಲಿ) ಮಧ್ಯಮ ಗಾತ್ರದ್ದು.

ಮ್ಯಾರಿನೆಟ್ ಮಾಡಲು
1 ಚಮಚ ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನ ಪೇಸ್ಟ್
1/2 ಚಮಚ ಕರಿಮೆಣಸು(ಜಜ್ಜಿರುವುದು)
3 ಚಮಚ ಲಿಂಬೆ ರಸ
1/2 ಚಮಚ ಚಿಲ್ಲಿ ಸಾಸ್
7 ಬೆಳ್ಳುಳ್ಳಿ ಎಸಲುಗಳು ತುಂಡರಿಸಿರುವುದು.
2 ಚಮಚ ಜೋಳಹಿಟ್ಟು
7 ಚಮಚ ಸೋಯಾ ಸಾಸ್
1/2 ಚಮಚ ಮೆಣಸಿನ ಹುಡಿ

ಸಾಸ್ ತಯಾರಿಸಲು
2 ಚಮಚ ಬಿಳಿ ವಿನೇಗರ್
3 ಚಮಚ ಸೋಯಾ ಸಾಸ್
1 ಚಮಚ ಎಳ್ಳು (ಹುರಿದಿರುವುದು)
2 ಚಮಚ ಹಸಿ ಮೆಣಸು ತುಂಡರಿಸಿರುವುದು

ತಯಾರಿಸುವ ವಿಧಾನ
*ಮಾರಿನೆಟ್ ಮಾಡಿಕೊಂಡ ಸಿಗಡಿಯನ್ನು ಅರ್ಧ ಗಂಟೆ ಕಾಲ ಹಾಗೆ ಇಡಿ.
*ಒಂದು ತವಾದಲ್ಲಿ 2 ಚಮಚ ಎಳ್ಳೆಣ್ಣೆ ಹಾಕಿ ಕಾಯಿಸಿ ಬಿಸಿಯಾದ ಬಳಿಕ ಸಿಗಡಿ ಹಾಕಿ.
*ಸಿಗಡಿ ಬಾಲವು ಸುತ್ತಿಕೊಳ್ಳುವ ತನಕ ಹುರಿಯಿರಿ. ಅತಿಯಾಗಿ ಬೇಯಿಸಬೇಡಿ.
*ಇದನ್ನು ಸಾಸ್ ಜತೆ ತಿನ್ನಲು ನೀಡಿ.

See also  ರಾತ್ರಿ ಊಟಕ್ಕೆ ವೆಜ್ ದಮ್ ಬಿರಿಯಾನಿ ತಯಾರಿಸಿ ನೋಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು