News Kannada
Tuesday, December 06 2022

ಅಡುಗೆ ಮನೆ

ಮನೆಯಲ್ಲೇ ತಯಾರಿಸಿ ನೋಡಿ ವೆಜ್ ಮಂಚೂರಿಯನ್

Photo Credit :

ಮನೆಯಲ್ಲೇ ತಯಾರಿಸಿ ನೋಡಿ ವೆಜ್ ಮಂಚೂರಿಯನ್

ಬಹಳ ಸಮಯ ಆಯ್ತು ಹೊರಗಡೆ ಹೋಗಿ ಏನೂ ತಿಂದೇ ಇಲ್ಲ. ಹೊರಗಡೆ ಹೋಗಿ ತಿನ್ನೋಕೇ ಏನೋ ಹೆದರಿಕೆ. ಅದರಿಂದ ಮನೆಯಲ್ಲಿ ತಯಾರಿಸಿಕೊಂಡು ತಿನ್ನುತ್ತೇವೆ ಎನ್ನುವವರಿಗೆ ವೆಜ್ ಮಂಚೂರಿಯನ್ ಮಾಡುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಇಬ್ಬರಿಗೆ ಬಡಿಸಬಹುದಾದಷ್ಟು ಮತ್ತು ಸುಮಾರು 45 ನಿಮಿಷದಲ್ಲಿ ತಯಾರಿಸಬಹುದು.

ವೆಜ್ ಮಂಚೂರಿಯನ್ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು

1/2 ಕಪ್ ಕ್ಯಾಬೇಜ್
1/2 ಕಪ್ ಕ್ಯಾರೆಟ್
1/2 ಕಪ್ ಕ್ಯಾಪ್ಸಿಕಂ
1/2 ಕಪ್ ಸ್ಪ್ರಿಂಗ್ ಆನಿಯನ್
1 ಚಮಚ ಶುಂಠಿ
1 ಚಮಚ ಬೆಳ್ಳುಳ್ಳಿ
3 ಚಮಚ ಜೋಳ ಹಿಟ್ಟು
2 ಚಮಚ ಮೈದಾ
2 ಚಮಚ ಉಪ್ಪು
2 ಚಮಚ ಕರಿಮೆಣಸಿನ ಹುಡಿ
1 ಚಮಚ ಸೋಯಾ ಸಾಸ್
1 ಚಮಚ ನೀರು

ಮಂಚೂರಿಯನ್ ಸಾಸ್ ಮಾಡಲು
ಎಣ್ಣೆ
2 ಚಮಚ ಬೆಳ್ಳುಳ್ಳಿ
1 ಚಮಚ ಶುಂಠಿ
1 ಚಮಚ ಹಸಿ ಮೆಣಸು
2 ಚಮಚ ಸ್ಪ್ರಿಂಗ್ ಆನಿಯನ್
2 ಚಮಚ ಟೊಮೆಟೊ ಕೆಚಪ್
2 ಚಮಚ ಚಿಲ್ಲಿ ಸಾಸ್
1 ಚಮಚ ಸಾಯ ಸಾಸ್
1 ಚಮಚ ವಿನೇಗರ್
11/2 ಚಮಚ ಉಪ್ಪು
1 ಚಮಚ ಕರಿ ಮೆಣಸು
3 ಚಮಚ ಜೋಳದ ಹಿಟ್ಟು
1 ಕಪ್ ನೀರು

ವೆಜ್ ಮಂಚೂರಿಯನ್ ತಯಾರಿ
1.ತುಂಬಾ ಸಣ್ಣದಾಗಿ ಕತ್ತರಿಸಿಕೊಂಡಿರುವ ತರಕಾರಿಗಳನ್ನು ಒಂದು ಬೌಲ್ ಗೆ ಹಾಕಿ. ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಜೋಳದ ಹಿಟ್ಟು, ಮೈದಾ, ಉಪ್ಪು, ಕರಿಮೆಣಸು ಮತ್ತು ಸಾಯ ಸಾಸ್ ಹಾಕಿ.
2. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಅಂಟಿಗೆ ಬರುವಷ್ಟು ನೀರು ಹಾಕಿ.
3. ಇದನ್ನು ಸಣ್ಣ ಸಣ್ಣ ಚೆಂಡಿನ ಆಕೃತಿಯನ್ನು ಮಾಡಿ.
4. ಇದನ್ನು ಈಗ ಎಣ್ಣೆಯಲ್ಲಿ ಕರಿಯಿರಿ.

ಸಾಸ್ ತಯಾರಿಸುವುದು
1. ಒಂದು ತವಾಗೆ ಎಣ್ಣೆ ಹಾಕಿ ಅದರಲ್ಲಿ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿ ಮೆಣಸನ್ನು ಹುರಿಯಿರಿ.
2. ಇದಕ್ಕೆ ಸ್ಪ್ರಿಂಗ್ ಆನಿಯನ್, ಟೊಮೆಟೊ ಕೆಚಪ್, ಚಿಲ್ಲಿ ಸಾಸ್, ಸಾಯ ಸಾಸ್ ಮತ್ತು ವಿನೇಗರ್ ಬಳಿಕ ಉಪ್ಪು ಮತ್ತು ಕರಿಮೆಣಸು ಹಾಕಿ.
3. ಇದೆಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಇದಕ್ಕೆ ಜೋಳದ ಹಿಟ್ಟು ಮತ್ತು ನೀರು ಹಾಕಿ.
4. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ವೆಜ್ ಬಾಲ್ ಗಳನ್ನು ಇದಕ್ಕೆ ಹಾಕಿ.
5. ಸಾಸ್ ಮತ್ತು ಚೆಂಡನ್ನು ಸರಿಯಾಗಿ ಮಿಶ್ರಣ ಮಾಡಿ.
6. ಇದಕ್ಕೆ ಸ್ಪ್ರಿಂಗ್ ಆನಿಯನ್ ಮತ್ತು ಸೆಲರಿ ಹಾಕಿ ಅಲಂಕರಿಸಿ. ಬಿಸಿಯಿರುವಾಗಲೇ ಅನ್ನದೊಂದಿಗೆ ಬಡಿಸಿರಿ.

See also  ಬಿರಿಯಾನಿ ಜಗಳ ಬಿಟ್ಹಾಕಿ....ಫಿಶ್ ಬಿರಿಯಾನಿ ಮಾಡಿ ತಿನ್ನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು