ಕೆಲಸದ ಒತ್ತಡಕ್ಕೆ ಕೆಲವೊಮ್ಮೆ ಕೈಗೆ ಸಿಕ್ಕಿದನ್ನು ಸೇವಿಸಿ ತಾವು ಹೋಗಬೇಕಾದ ಕೆಲಸಗಳಿಗೆ ಹೋಗುವವರು ಇದ್ದಾರೆ. ಇನ್ನು ಕೆಲವರು ಅಡುಗೆ ಮಾಡೋ ಬದಲಿಗೆ ಬ್ರೆಡ್ ತಿಂದು ಸುಮ್ಮನಾಗುತ್ತಾರೆ. ಹೀಗೆ ಬ್ರೆಡ್ ತಿನ್ನುವವರು ಸ್ವಲ್ಪ ಸಮಯ ನೀಡಿದರೆ ಮಾಮೂಲಿ ಬ್ರೆಡ್ ತಿನ್ನುವ ಬದಲಿಗೆ ರುಚಿಯಾದ ಬ್ರೆಡ್ ರೋಸ್ಟ್ ತಯಾರಿಸಿ ಸೇವಿಸಬಹುದಾಗಿದೆ.
ಬ್ರೆಡ್ ರೋಸ್ಟ್ ತಯಾರಿಸಲು ಬೇಕಾಗುವ ಪದಾರ್ಥಗಳು ಹೀಗಿವೆ.
ತುಪ್ಪ ಅಥವಾ ಎಣ್ಣೆ
ಮೈದಾ- 4ರಿಂದ 6 ಚಮಚ
ಈರುಳ್ಳಿ-2
ಹಸಿಮೆಣಸು- 4ರಿಂದ 6
ಆಲೂಗೆಡ್ಡೆ- 100ಗ್ರಾಂ
ಬೀನ್ಸ್-100ಗ್ರಾಂ
ಕ್ಯಾರೆಟ್- ಒಂದು
ಶುಂಠಿಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
ಸಕ್ಕರೆ- ಅರ್ಧ ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಚಿಟಿಕೆಯಷ್ಟು ಉಪ್ಪು, ಅರಶಿನ
ಮಾಡುವ ವಿಧಾನ ಹೀಗಿದೆ
ಮೊದಲಿಗೆ ಆಲೂಗೆಡ್ಡೆಯನ್ನು ಬೇಯಿಸಿ ಅದನ್ನು ಪುಡಿಮಾಡಿಟ್ಟುಕೊಳ್ಳಬೇಕು. ಮತ್ತೊಂದು ಕಡೆ ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಅದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ಹಸಿಮೆಣಸು, ಬೀನ್ಸ್, ಕ್ಯಾರೆಟ್ ಮತ್ತು ಸ್ವಲ್ಪ ಶುಂಠಿಬೆಳ್ಳುಳ್ಳಿ ಪೇಸ್ಟ್ ನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಅರಶಿನ ಪುಡಿ, ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಬೇಕು. ಆ ನಂತರ ಆಲೂಗೆಡ್ಡೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದಕ್ಕೆ ಕೊತ್ತಂಬರಿ ಹಾಕಿ ಮೈದಾ ಹಾಕಿ ಚೆನ್ನಾಗಿ ಕಲೆಸಿ ಬಳಿಕ ಈ ಮಸಾಲೆ ಪದಾರ್ಥಗಳನ್ನು ಬ್ರೆಡ್ ಮೇಲೆ ಹಾಕಿ ಮೊದಲಿಗೆ ಮಸಾಲೆ ಹಾಕಿದ ಕಡೆ ತಾವಾದಲ್ಲಿಟ್ಟು ಬೇಯಿಸಿ ಸ್ವಲ್ಪ ಎಣ್ಣೆ ಹಾಕಿ ರೋಸ್ಟ್ ಮಾಡಬೇಕು ಬಳಿಕ ಸೇವಿಸಬಹುದಾಗಿದೆ.