ಒಂದೇ ತರಕಾರಿಯನ್ನು ಬಳಸಿ ಪದಾರ್ಥಗಳನ್ನು ತಯಾರಿಸುವುದಕ್ಕಿಂತ ನಾಲ್ಕಾರು ತರಕಾರಿಗಳನ್ನು ಸೇರಿಸಿ ಪದಾರ್ಥ ತಯಾರಿಸಿದರೆ ಚೆನ್ನಾಗಿರುತ್ತದೆ. ಇದರಿಂದ ತರಕಾರಿಯಲ್ಲಿರುವ ಪೌಷ್ಠಿಕಾಂಶಗಳು ದೇಹಕ್ಕೆ ತಲುಪಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.
ಮಿಕ್ಸ್ ತರಕಾರಿ ಕೂಟು ಕರಿ ಮಾಡಲು ಬೇಕಾಗುವ ಪದಾರ್ಥಗಳು ಹೀಗಿವೆ…
ಬೀನ್ಸ್
ಸೌತೆಕಾಯಿ
ಆಲೂಗೆಡ್ಡೆ
ಮೂಲಂಗಿ
ಬೇಳೆ
ಅಕ್ಕಿ- 2 ಟೀ ಚಮಚ
ಕೊತ್ತಂಬರಿ ಸೊಪ್ಪು
ಒಣಮೆಣಸಿನ ಕಾಯಿ
ದನಿಯಾ
ಅರಿಶಿಣಪುಡಿ
ಕಾಯಿ ತುರಿ
ಜೀರಿಗೆ
ಮಾಡುವ ವಿಧಾನ ಹೀಗಿದೆ…
ಮೊದಲಿಗೆ ತರಕಾರಿಗಳಾದ ಬೀನ್ಸ್, ಸೌತೆಕಾಯಿ, ಆಲೂಗೆಡ್ಡೆ, ಮೂಲಂಗಿ ಮತ್ತು ಬೇಳೆಯನ್ನು ರುಚಿಗೆ ತಕ್ಕಂತೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಅಕ್ಕಿ, ಒಣಮೆಣಸಿನಕಾಯಿ, ದನಿಯಾ, ಜೀರಿಗೆ ಸ್ವಲ್ಪ ಸಮಯ ನೆನೆಸಿ ಬಳಿಕ ಅದಕ್ಕೆ ಕಾಯಿ, ಸ್ವಲ್ಪ ಅರಿಶಿಣ ಹಾಕಿ ಚೆನ್ನಾಗಿ ರುಬ್ಬಬೇಕು. ಇದಕ್ಕೆ ಹುಣಸೆ ಹಣ್ಣನ್ನು ಕಿವುಚಿ ರಸ ತೆಗೆದು ಬೆರೆಸಬೇಕು. ಬಳಿಕ ಪಾತ್ರೆಯಲ್ಲಿ ಎಣ್ಣೆಯಿಟ್ಟು ಸಾಸಿವೆಯನ್ನು ಸಿಡಿಸಿ ಅದಕ್ಕೆ ಮಸಾಲೆ ಪದಾರ್ಥ ಹಾಗೂ ಬೇಯಿಸಿಟ್ಟ ತರಕಾರಿಯನ್ನು ಸೇರಿಸಿ ಒಗ್ಗರಣೆ ಹಾಕಿ ಕುದಿಸಿ ಇಳಿಸಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಸವಿಯಲು ಮಿಕ್ಸೈಡ್ ತರಕಾರಿ ಕೂಟು ಕರಿ ರೆಡಿಯಾಗುತ್ತದೆ. ಚಪಾತಿ, ಪರೋಟ, ಪೂರಿಗೆ ಉತ್ತಮ ಕಾಂಬಿನೇಷನ್ ಆಗಿದೆ.