ಮಟನ್ ಬಿರಿಯಾನಿ ಅಂದ್ರೆ ಮಾಂಸಹಾರಿಗಳ ಬಾಯಲ್ಲಿ ನೀರೂರಿವುದು ಸಹಜ. ಹೋಟೆಲ್ ಗಳಲ್ಲಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮಂದಿ ಹೇಗಪ್ಪಾ ಮಾಡೋದು ಎಂದು ತಲೆಕೆಡಿಸಿಕೊಂಡಿದ್ದರೆ ಸಿಂಪಲ್ ಮಟನ್ ಬಿರಿಯಾನಿ ಮಾಡುವ ಸುಲಭ ವಿಧಾನ ಇಲ್ಲಿದೆ ಮಾಡಿನೋಡಿ.. ಸಿಂಪಲ್ ಮಟನ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು ಈ ರೀತಿ ಇವೆ.
ಮಟನ್ – 1ಕಿ.ಗ್ರಾಂ
ಈರುಳ್ಳಿ- 3
ಟೊಮ್ಯಾಟೋ- 2
ಶುಂಠಿ ಪೇಸ್ಟ್- 25ಗ್ರಾಂ
ಬೆಳ್ಳುಳ್ಳಿ- 25ಗ್ರಾಂ
ಚಕ್ಕೆ-4 ಚೂರು
ಲವಂಗ-4
ಏಲಕ್ಕಿ-6
ಖಾರದಪುಡಿ- 2ಚಮಚ
ಪುದಿನಾ- ಅರ್ಧಕಟ್ಟು
ಮೆಂತೆ- ಅರ್ಧಕಟ್ಟು
ಕೊತ್ತಂಬರಿ- ಅರ್ಧಕಟ್ಟು
ಪಾಲಕ್- ಅರ್ಧಕಟ್ಟು
ಅರಿಶಿನ- 1ಚಮಚ
ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ ಹೀಗಿದೆ..
ಮೊದಲು ಮಾಂಸವನ್ನು ಸಿದ್ದಮಾಡಿಟ್ಟುಕೊಂಡು, ಈರುಳ್ಳಿಯನ್ನು ಹಚ್ಚಿಟ್ಟುಕೊಳ್ಳಬೇಕು ಹಾಗೆಯೇ ಸೊಪ್ಪುಗಳನ್ನು ಶುಚಿಮಾಡಿಕೊಳ್ಳಬೇಕು. ಮೊದಲಿಗೆ ಕುಕ್ಕರ್ ನಲ್ಲಿ ಎಣ್ಣೆಹಾಕಿ ಅದರಲ್ಲಿ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಅದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು. ಬಳಿಕ ಮಟನ್ ಹಾಕಬೇಕು. ಅದಾದ ಬಳಿಕ ಚಕ್ಕೆ, ಲವಂಗ, ಏಲಕ್ಕಿ ಹಾಕಿ, ಖಾರದಪುಡಿ ಹಾಕಿ ತಿರುಗಿಸಬೇಕು. ಅದಕ್ಕೆ ಸೊಪ್ಪನ್ನು ಜತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೊನೆಯಲ್ಲಿ ಅಕ್ಕಿಯನ್ನು ಹಾಕಬೇಕು. ಬಳಿಕ ಅಳತೆಗೆ ತಕ್ಕಷ್ಟು ನೀರು ಹಾಕಿ ಕುಕ್ಕರ್ನಲ್ಲಿ ಎರಡು ವಿಶಲ್ ಕೂಗಿಸಿ ತೆಗೆದು ಸೌಟು ಹಾಕಿ ಚೆನ್ನಾಗಿ ಮಿಶ್ರ ಮಾಡಿದರೆ ಮಟನ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.