ಸಂಜೆಯಾಗುತ್ತಲೇ ಮನೆಯಲ್ಲಿರಲಿ ಅಥವಾ ಕಚೇರಿಯಲ್ಲಿರಲಿ, ಏನಾದರೂ ಕರಿದಿರುವ ತಿಂಡಿ ತಿನ್ನಬೇಕು ಎನ್ನುವ ಮನಸ್ಸಾಗುವುದು. ಇದಕ್ಕಾಗಿ ನಾವು ರಸ್ತೆ ಬದಿ ಇರುವ ಗಾಡಿ ಹುಡುಕುತ್ತಾ ಹೋಗುತ್ತೇವೆ. ಆದರೆ ಮನೆಯಲ್ಲೇ ಕೆಲವು ಕರಿದ ತಿಂಡಿ ತಯಾರಿಸಿದರೆ ಅದು ರುಚಿ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಬಾಳೆಕಾಯಿ ಪೋಡಿ ಮಾಡುವುದು ಹೇಗೆ ಎಂದು ನೀವಿಲ್ಲಿ ತಿಳಿಯಿರಿ.
ತಯಾರಿಗೆ ಸಮಯ: ಹತ್ತು ನಿಮಿಷ
ಅಡುಗೆ ಸಮಯ:15 ನಿಮಿಷ
4 ಮಂದಿಗೆ
ಬೇಕಾಗುವ ಸಾಮಗ್ರಿಗಳು
ಸಿಪ್ಪೆ ತೆಗೆದಿರಿಸಿಕೊಂಡಿರುವ ಎರಡು ಹಸಿ ಬಾಳೆಕಾಯಿ
ಕರಿಯಲು ಎಣ್ಣೆ
¾ ಕಪ್ ಕಡಲೆ ಹಿಟ್ಟು
¼ ಕಪ್ ಅಕ್ಕಿ ಹಿಟ್ಟು
1 ಚಮಚ ಉಪ್ಪು
1 ಚಮಚ ಕೆಂಪು ಮೆಣಸಿನ ಹುಡಿ
¼ ಚಮಚ ಅಜ್ವೈನ್
¼ ಚಮಚ ಅರಶಿನ
ಚಿಟಿಕೆ ಹಿಂಗು
1/8 ಚಮಚ ಅಡುಗೆ ಸೋಡಾ
ತಯಾರಿಸುವ ವಿಧಾನ
ಸಣ್ಣ ಪಾತ್ರೆಯಲ್ಲಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ತೆಳು ಮಾಡಲು ಬೇಕಿದ್ದರೆ ನೀರು ಹಾಕಿ.
ಬಾಳೆಕಾಯಿ ಉದ್ದಗೆ ಕತ್ತರಿಸಿಕೊಳ್ಳಿ
ಬಾಣಲೆಯಲ್ಲಿ ಎಣ್ಣೆ ಕುದಿಸಿ
ಬಾಳೆಕಾಯಿಯನ್ನು ಕಡಲೆ ಹಿಟ್ಟಿನಲ್ಲಿ ಮುಳುಗಿಸಿ, ಎಣ್ಣೆಗೆ ಹಾಕಿ ಕರಿಯಿರಿ.
ತೆಂಗಿನ ಕಾಯಿ ಅಥವಾ ಪುದೀನಾ ಚಟ್ನಿ ಜತೆಗೆ ಸೇವಿಸಿದರೆ ತುಂಬಾ ರುಚಿಕರವಾಗಿರುವುದು.