ಮಾಮೂಲಿ ಇಡ್ಲಿ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ತಟ್ಟೆ ಇಡ್ಲಿಗೆ ಒಂದಷ್ಟು ವಿಶೇಷತೆಯಿದೆ. ಇದನ್ನು ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಬೇಕಾಗುವ ಪದಾರ್ಥಗಳು
ಅಕ್ಕಿರವೆ- ಒಂದು ಪಾವು
ಉದ್ದಿನ ಬೇಳೆ- ಒಂದು ಪಾವು
ಮೊಸರು- ಒಂದು ಪಾವು
ಕೊಬ್ಬರಿ- ಮುಕ್ಕಾಲು ಪಾವು
ಕಡ್ಲೆ ಬೇಳೆ- ಒಂದು ಟೇಬಲ್ ಚಮಚೆ
ಹಸಿಮೆಣಸಿಕಾಯಿಪೇಸ್ಟ್- ಒಂದು ಟೇಬಲ್ ಚಮಚೆ
ಕೊತ್ತಂಬರಿ, ಕರಿಬೇವು ಸೊಪ್ಪು- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಅಡುಗೆ ಸೋಡಾ- ಎರಡು ಚಿಟಿಕೆಯಷ್ಟು
ಎಣ್ಣೆ- ನಾಲ್ಕು ಟೇಬಲ್ ಚಮಚೆ
ಮಾಡುವ ವಿಧಾನ ಹೀಗಿದೆ
ಮೊದಲಿಗೆ ಅಕ್ಕಿರವೆಯನ್ನು ಮೊಸರಿನೊಂದಿಗೆ ರಾತ್ರಿಯೇ ನೆನೆಸಿಡಬೇಕು. ಮತ್ತೊಂದೆಡೆ ಉದ್ದಿನ ಬೇಳೆ, ಕಡ್ಲೆಬೇಳೆಯನ್ನು ನೆನೆಸಿಟ್ಟುಕೊಳ್ಳಬೇಕು. ಬೆಳಿಗ್ಗೆ ಎಲ್ಲವನ್ನು ಸೇರಿಸಿ ರುಬ್ಬಬೇಕು ನಂತರ ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ಮಾಡಿ ಸೇರಿಸಿ ಸೋಡಾವನ್ನು ಬೆರೆಸಿ ಚೆನ್ನಾಗಿ ತಿರುಗಿಸಿ ಬಳಿಕ ತಟ್ಟೆಯಲ್ಲಿ ಹಾಕಿ ಬೇಯಿಸಿ ತೆಗೆದರೆ ತಟ್ಟೆ ಇಡ್ಲಿ ರೆಡಿ.