ಬೇಕಾಗುವ ಸಾಮಗ್ರಿಗಳು:
ಕಡಲೆಹಿಟ್ಟು – 2 ಕಪ್,
ಉಪ್ಪು – ಅರ್ಧ ಟೀ ಚಮಚ,
ನೀರು – ಒಂದೂವರೆ ಕಪ್,
ಎಣ್ಣೆ – 1 ಟೇಬಲ್ ಚಮಚ (ಕಲೆಸಿದ ಹಿಟ್ಟಿಗೆ ಹಾಕಲು),
ಗೋಡಂಬಿ – 20,
ದ್ರಾಕ್ಷಿ – 30,
ಲವಂಗ – 10,
ಸಕ್ಕರೆ – 1 ಕಪ್,
ನೀರು – ಮುಕ್ಕಾಲು ಕಪ್,
ಕೇಸರಿದಳ – 10 ರಿಂದ 15,
ಏಲಕ್ಕಿ ಪುಡಿ – ಅರ್ಧ ಟೀ ಚಮಚ,
ಬೂಂದಿ ಕಾಳು – 2 ಕಪ್,
ಪಟಿಕ ಚಿಟಿಕೆ,
ಕರಿಯಲು ಎಣ್ಣೆ.
ತಯಾರಿಸುವ ವಿಧಾನ
ಕಡಲೆಹಿಟ್ಟು ಮತ್ತು ಉಪ್ಪನ್ನು ಒಟ್ಟಿಗೆ ಹಾಕಿ ಜರಡಿ ಹಿಡಿಯಿರಿ. ಹಿಟ್ಟಿಗೆ ಒಂದೂವರೆ ಕಪ್ ನೀರನ್ನು ಹಾಕಿ ಮಿಶ್ರಣ ಮಾಡಿ. ಅದಕ್ಕೆ 1 ಟೇಬಲ್ ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ದೋಸೆ ಹಿಟ್ಟಿನ ಹದವಿರಲಿ. ಎಣ್ಣೆಯನ್ನು ಬಿಸಿ ಮಾಡಿ. ರಂಧ್ರವಿರುವ ಜಾಲರಿ ಸೌಟಿಗೆ ಹಿಟ್ಟನ್ನು ಹಾಕಿ ಎಣ್ಣೆಗೆ ಬಿಡಿ. ಮಧ್ಯಮ ಉರಿಯಲ್ಲಿ ಕರಿಯಿರಿ. ಕಾಳು ಗರಿಗರಿಯಾಗಿ ಬೆಂದ ನಂತರ ಎಣ್ಣೆಯಿಂದ ತೆಗೆಯಿರಿ.
ಬೂಂದಿ ಲಡ್ಡು ಮತ್ತು ಸಿಹಿ ಬೂಂದಿ ತಯಾರಿಸುವ ವಿಧಾನ: ಬಾಣಲೆಗೆ 1 ಟೇಬಲ್ ಚಮಚ ತುಪ್ಪ ಹಾಕಿ ಬಿಸಿ ಮಾಡಿ. ಗೋಡಂಬಿ, ದ್ರಾಕ್ಷಿ, ಲವಂಗವನ್ನು ಹಾಕಿ ಹುರಿದುಕೊಳ್ಳಿ. ಸಕ್ಕರೆಯನ್ನು ಬಾಣಲೆಗೆ ಹಾಕಿ ನೀರನ್ನು ಹಾಕಿ ಕುದಿಸಿ. ಚಿಟಿಕೆ ಪಟಿಕ, ಕೇಸರಿದಳ, ಏಲಕ್ಕಿಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಸಕ್ಕರೆ ಒಂದೆಳೆ ಪಾಕ ಬಂದಾಗ ಒಲೆಯನ್ನು ಆರಿಸಿ. ಹುರಿದ ಗೋಡಂಬಿ, ದ್ರಾಕ್ಷಿ, ಲವಂಗ, ಬೂಂದಿಕಾಳನ್ನು ಹಾಕಿ ಮಿಶ್ರಣ ಮಾಡಿ. ಬೂಂದಿಕಾಳು ಸಕ್ಕರೆಯನ್ನು ಹೀರಿಕೊಳ್ಳುವವರೆಗೆ ಬಿಡಿ. ಅರ್ಧ ಭಾಗದಷ್ಟು ಬೂಂದಿ ಕಾಳನ್ನು ತೆಗೆದು ತಟ್ಟೆಗೆ ಆರಲು ಹಾಕಿ. ಉಳಿದ ಅರ್ಧ ಭಾಗದ ಬೂಂದಿ ಕಾಳನ್ನು ಬಿಸಿ ಇರುವಾಗಲೇ ಉಂಡೆಯನ್ನು ಕಟ್ಟಿಕೊಳ್ಳಿ. ರುಚಿಕರವಾದ ಬೂಂದಿ ಕಾಳು ಮತ್ತು ಬೂಂದಿ ಲಡ್ಡು ಸವಿಯಲು ಸಿದ್ಧ.