ಆರೋಗ್ಯಕರವಾದ ಗೋಧಿ ಪಾಯಸ ಮಾಡಲು ಇಲ್ಲಿದೆ ಸುಲಭ ವಿಧಾನ
ಬೇಕಾಗುವ ಸಾಮಗ್ರಿಗಳು:
* ಗೋಧಿ ನುಚ್ಚು- 1 ಕಪ್
* ತೆಂಗಿನಕಾಯಿ ತುರಿ- 1 ಕಪ್
* ಬೆಲ್ಲ -2 ಕಪ್
* ಬಾದಾಮಿ – ಅರ್ಧ ಕಪ್
ಮಾಡುವ ವಿಧಾನ:
* ಬಾಣಲೆಯಲ್ಲಿ ಒಂದು ಕಪ್ ಗೋಧಿ ನುಚ್ಚು ಹಾಕಿ ಸ್ವಲ್ಪ ಹುರಿದು ಕೊಂಡು ಕುಕ್ಕರಲ್ಲಿ ಹುರಿದ ನುಚ್ಚು ಮೂರು ಕಪ್ ನೀರು ಹಾಕಿ ಬೇಯಿಸಿಕೊಳ್ಳಬೇಕು.
* ಮಿಕ್ಸಿಗೆ ತುರಿದ ತೆಂಗಿನ ಕಾಯಿ, ಬಾದಾಮಿ ಹಾಕಿ ನುಣ್ಣಗೆ ರುಬ್ಬಿ ಕೊಳ್ಳಬೇಕು
* ಬೆಂದ ಗೋಧಿ ನುಚ್ಚಿಗೆ ಸೇರಿಸಿ, ಬೆಲ್ಲ ಹಾಕಿ ಕುದಿಸಿದರೆ ರುಚಿ ಮತ್ತು ಆರೋಗ್ಯಕರವಾದ ಗೋಧಿ ನುಚ್ಚಿನ ಪಾಯಸ ಸಿದ್ಧವಾಗುತ್ತದೆ.