News Kannada
Wednesday, September 28 2022

ಅಡುಗೆ ಮನೆ

ಸಂಜೆ ಸ್ನಾಕ್ಸ್‌ : ತಿನ್ನಲು ಗರಿಗರಿಯಾದ ರುಚಿಕರವಾದ ತಿಂಡಿ ಆಲೂ 65! - 1 min read

Snacks in the evening: A crisp delicious snack to eat aloo 65!
Photo Credit : Wikimedia

ಸಾಮಾನ್ಯವಾದ ಆಲೂಗಡ್ಡೆಯನ್ನು ಒಳಗೊಂಡಿರುವ ಅನೇಕ ಭಾರತೀಯ ತಿಂಡಿಗಳಿವೆ. ಆದರೂ, ಈ ಆಲೂ 65 ರೆಸಿಪಿ ನನಗೆ ವಿಭಿನ್ನ.  ಆಲೂ 65 ಚಟ್ನಿಯೊಂದಿಗೆ ಬಡಿಸಿದಾಗ, ಇದು ಸಂತೋಷಕರವಾದ ಭಕ್ಷ್ಯವಾಗಿದೆ ಅಥವಾ ಒಂದು ಪರಿಪೂರ್ಣ ಪೂರ್ವ-ಊಟದ ತಿಂಡಿಯಾಗಿದೆ.

ಆಲೂ 65 ಒಂದು ಗರಿಗರಿಯಾದ ರುಚಿಕರವಾದ ತಿಂಡಿ ಆಗಿದ್ದು, ಕೆಲವೇ ನಿಮಿಷಗಳಲ್ಲಿ ತ್ವರಿತವಾಗಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು:

1/2 ಕೆಜಿ ಆಲೂಗಡ್ಡೆ,
2 ಟೇಬಲ್ಸ್ಪೂನ್ ಮೈದಾ
2 ಟೇಬಲ್ಸ್ಪೂನ್ ಅಕ್ಕಿ ಹಿಟ್ಟು
2 ಟೇಬಲ್ಸ್ಪೂನ್ ಕಾರ್ನ್ ಫ್ಲೋರ್
1 ಟೀಚಮಚ ಕೊತ್ತಂಬರಿ ಪುಡಿ
1/2 ಟೀಚಮಚ ಜೀರಿಗೆ ಪುಡಿ
1/2 ಟೀಚಮಚ ಅರಿಶಿನ ಪುಡಿ
ಎಣ್ಣೆ, ಉಪ್ಪು
4 ರಿಂದ 5 ಎಸಳು ಬೆಳ್ಳುಳ್ಳಿ, ಲವಂಗ
2 ಒಣ ಮೆಣಸಿನಕಾಯಿ
3 ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆ
1/2 ಕಪ್ ಮೊಸರು, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: 

ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಅರ್ಧ ಕೆಜಿ ಆಲೂ ಗಡ್ಡೆ ಹಾಕಿ ಅರ್ಧಂಬರ್ಧ ಬೇಯಿಸಿ. ಆಲೂ ಬೆಂದ ಬಳಿಕ ಸಿಪ್ಪೆ ತೆಗೆದು ಸ್ವಲ್ಪ ದಪ್ಪವಾಗಿ ಕತ್ತರಿಸಿಟ್ಟುಕೊಳ್ಳಿ.

ಈಗ ಒಂದು ಮಿಕ್ಸಿಂಗ್‌ ಬೌಲ್‌ಗೆ ಮೈದಾ, ಅಕ್ಕಿ ಹಿಟ್ಟು, ಕಾರ್ನ್‌ ಫ್ಲೋರ್‌, ಕೊತ್ತಂಬರಿ ಪುಡಿ, ಜೀರಿಗೆ, ಅರಿಶಿನ ಹಾಕಿ ಉಪ್ಪು ಹಾಕಿ ಬಜ್ಜಿ ಹದಕ್ಕೆ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿದ ಆಲೂ ಪೀಸ್‌ ಹಾಕಿ ಚೆನ್ನಾಗಿ ಕೋಟಿಂಗ್‌ ಮಾಡಿ ಕಾದ ಎಣ್ಣೆಯಲ್ಲಿ ಗೋಲ್ಡನ್‌ ಬ್ರೌನ್‌ ಕಲರ್‌ ಬರುವವರೆಗೆ ಕರಿಯಿರಿ.

ನಂತರ ಒಂದು ಒಂದು ಬಾಣಲೆಗೆ ಎಣ್ಣೆ ಹಾಕಿ ಬೆಳ್ಳುಳ್ಳಿ, ಲವಂಗ ಸಣ್ಣಗೆ ಕತ್ತರಿಸಿ ಹಾಕಿ, ಒಣ ಮೆಣಸಿನಕಾಯಿ, ಹಸಿ ಮೆಣಸಿನ ಕಾರಿ ಕರಿಬೇವು ಹಾಕಿ ಹುರಿಯಿರಿ. ನಂತರ ಮೊಸರು ಹಾಕಿ ಅಗತ್ಯವಿದ್ದರೆ ಫುಡ್‌ ಕಲರ್‌ ಹಾಕಿ ಒಂದು ನಿಮಿಷ ಕುದಿಸಿ ಅದಕ್ಕೆ ಕರಿದಿಟ್ಟ ಆಲೂ ಹಾಕಿ ಚೆನ್ನಾಗಿ ತಿರುಗಿಸಿ, ಕೊತ್ತಂಬರಿ ಸೊಪ್ಪು ಉದುರಿಸಿದರೆ ಆಲೂ 65ರೆಡಿ.

ಸಂಜೆ ಸ್ನಾಕ್ಸ್‌ ಆಗಿ, ಮಳೆ ಬರುವ ವೇಳೆ ತಿನ್ನಲು ಬಿಸಿಯಾಗಿ ರುಚಿಕರವಾಗೂ ಇರುತ್ತದೆ.

See also  ಬೆಳ್ತಂಗಡಿ: ಮುಂಡಾಜೆ ನದಿಯಲ್ಲಿ ನಾಲ್ಕಾರು ಗೋಣಿ ಚೀಲ ಕೋಳಿ ತ್ಯಾಜ್ಯ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

4383
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು