ಸಿಹಿ ಇಲ್ಲದೆ ಯಾವತ್ತಿಗೂ ಯಾವ ಊಟವು ಸಂಪೂರ್ಣವಲ್ಲ ಸರಳವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಸಿಹಿ ತಿನಿಸು ತೆಂಗಿನಕಾಯಿ ಬರ್ಫಿ. ಅದನ್ನು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು :
• ತೆಂಗಿನಕಾಯಿತುರಿ – 1 ಕಪ್
• ಸಕ್ಕರೆ – 1 ಕಪ್
• ಏಲಕ್ಕಿ – 6s
• ತುಪ್ಪ – 4 ಚಮಚ
• ಕಡ್ಲೆ ಹಿಟ್ಟು – 4 ಚಮಚ
ಮಾಡುವ ವಿಧಾನ :
ಸಕ್ಕರೆಯನ್ನ ಬಾಣಲೆಯಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಒಲೆಯ ಮೇಲಿಟ್ಟು ಪಾಕ ಮಾಡಿ. ಪಾಕವು ನೂಲಿನಂತೆ ಬಂದರೆ ಅದಕ್ಕೆ ತೆಂಗಿನ ತುರಿಯನ್ನು ಹಾಕಿ ಮುಗುಚುತ್ತಾ ಇರಬೇಕು. ಸ್ವಲ್ಪ ಹೊತ್ತಿನಲ್ಲಿ ತುಪ್ಪವನ್ನು ಹಾಕಿ ಮತ್ತೆ ಸ್ವಲ್ಪ ಹೊತ್ತು ಕೈಯಾಡಿಸುತ್ತಿರಬೇಕು. ಈ ಮಿಶ್ರಣವು ಗಟ್ಟಿಯಾಗಿ ಪಾತ್ರೆಯ ತಳ ಬಿಡುತ್ತಾ ಬರುವಾಗ, ಕಡ್ಲೆ ಹಿಟ್ಟನ್ನು ಹಾಕಿ ಸ್ವಲ್ಪ ಹೊತ್ತು ಮಗುಚಬೇಕು, ಮಿಶ್ರಣವು ಗಟ್ಟಿಯಾಗುತ್ತಿದಂತೆ ಕೊನೆಗೆ ಏಲಕ್ಕಿ ಪುಡಿ ಬೆರೆಸಿ ತುಪ್ಪ ಸವರಿದ ತಟ್ಟೆಗೆ ಹಾಕಿ ಆರಿದ ಮೇಲೆ ಬೇಕಾದ ಆಕಾರದಲ್ಲಿ ತುಂಡರಿಸಿಕೊಂಡು ಸವಿದರೆ ಆಯಿತು.