News Kannada
Sunday, October 01 2023
ಅಡುಗೆ ಮನೆ

ಮಜ್ಜಿಗೆ ಹುಳಿ: ತಯಾರಿಸು ಸುಲಭ ವಿಧಾನ ಇಲ್ಲಿದೆ

Buttermilk sour for lunch
Photo Credit : Facebook

ಮದುವೆ ಮನೆಯಲ್ಲಿಯೇ ಇರಲಿ ಮನೆಯಲ್ಲಿಯೇ ಇರಲಿ ಮಜ್ಜಿಗೆ ಹುಳಿ ಇಲ್ಲದ ಊಟ ಸಪ್ಪೆಯಾಗುತ್ತದೆ. ಮುಖ್ಯವಾಗಿ ಬ್ರಾಹ್ಮಣರ ಶೈಲಿಯಶುಭ ಸಮಾರಂಭಗಳಲ್ಲಿ ಮಜ್ಜಿಗೆ ಹುಳಿ ಇಲ್ಲದ ಊಟವೇ ಅಲ್ಲ. ನಮಗೆ ಬೇಕಾದರೆ ಮನೆಯಲ್ಲಿ ಸುಲಭವಾಗಿ ಮಜ್ಜಿಗೆ ಹುಳಿಯನ್ನು ತಯಾರಿಸಬಹುದು ಅದರ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ಮಜ್ಜಿಗೆ ಹುಳಿಗೆ ಮುಖ್ಯವಾಗಿ ಹಲವರು ಬಗ್ಗೆ ತರಕಾರಿಗಳು ಮುಖ್ಯವಾಗುತ್ತವೆ. ನಿಮ್ಮಿಷ್ಟದ ತರಕಾರಿಗಳನ್ನು ಈ ಮಜ್ಜಿಗೆ ಹುಳಿಯಲ್ಲಿ ಬಳಸಬಹುದು. ಮುಖ್ಯವಾಗಿ ಕೆಲವು ತರಕಾರಿಗಳು ಇಂತಿವೆ:

ಬದನೆಕಾಯಿ ಬೆಂಡೆಕಾಯಿ ತೊಂಡೆಕಾಯಿ ಅಲಸಂಡೆ ಎಳೆಪಡುವಲಕಾಯಿ ಸೌತೆಕಾಯಿ ಎಳೆ ಮುಳ್ಳು ಸೌತೆಕಾಯಿ ಕುಂಬಳಕಾಯಿ ಬಾಳೆಕಾಯಿ ಬಾಳೆದೆಂಡು ಬೀನ್ಸ್ ಕಾಲಿಫ್ಲವರ್ ಹಸಿಮೆಣಸಿನಕಾಯಿ ದೊಣ್ಣೆ ಮೆಣಸಿನಕಾಯಿ ಎಳೆಹಲಸು, ಸುವರ್ಣ ಗೆಡ್ಡೆ ಕೇಸುವಿನ ಗೆಡ್ಡೆ ನುಗ್ಗೆಕಾಯಿ ಇತ್ಯಾದಿ. ಅರ್ಧ ಚಮಚ ಮೆಣಸಿನ ಕಾಯಿ ಪುಡಿ, ಸಣ್ಣ ತೆಂಗಿನಕಾಯಿ 1,  ಒಂದು ಅರ್ಧ ಲೀಟರ್ ಮಜ್ಜಿಗೆ.

ಮಾಡುವ ವಿಧಾನ :

ತರಕಾರಿಯನ್ನು ಚೆನ್ನಾಗಿ ತೊಳೆದು ಹೆಚ್ಚಿ ಉಪ್ಪು ಮೆಣಸಿನ ಕಾಯಿ ಪುಡಿ ಹಾಕಿ ಹೋಳುಗಳು ಮುಚ್ಚಿ ಹೋಗುವಷ್ಟು ನೀರು ಹಾಕಿ ಬೇಯಿಸಿ.
ಹೋಳುಗಳು ಅರ್ಧ ಬೆಂದ ನಂತರ ಅದಕ್ಕೆ ನುಣ್ಣಗೆ ರುಬ್ಬಿದ ತೆಂಗಿನಕಾಯಿ ಜೊತೆ ಸ್ವಲ್ಪ ಹುಳಿಮಜ್ಜಿಗೆ ಹಾಗು ಸ್ವಲ್ಪ ಸಿಹಿ ಮಜ್ಜಿಗೆ ಹಾಕಿ ಸ್ವಲ್ಪ ಹೊತ್ತು ಬೇಯಿಸಿ ಒಣ ಮೆಣಸು ಹಾಗೂ ಸಾಸಿವೆಯ ಒಗ್ಗರಣೆ ಕೊಟ್ಟರೆ ಮಜ್ಜಿಗೆ ಹುಳಿ ಸವಿಯಲು ಸಿದ್ಧ.

See also  ಹಬ್ಬದ ವಿಶೇಷ ಸಿಹಿ ಬೂಂದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು