ಸುಲಭವಾಗಿ ತಯಾರಾಗುತ್ತದೆ ಬೆಳಗಿನ ಜಾವದ ರುಚಿ ರುಚಿಯಾದ ಶಾವಿಗೆ ಇಡ್ಲಿ. ಅದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು : ಶಾವಿಗೆ-4ಕಪ್, ಮೊಸರು- ಕಲಸಲು ಅವಶ್ಯವಿರುವಷ್ಟು, ಕಡಲೆ, ಉದ್ದಿನಬೇಳೆ-1ಚಮಚ, ಜೀರಿಗೆ-ಅರ್ಧ ಚಮಚ, ಕರಿಬೇವು, ಕೊತ್ತಂಬರಿ ಸೊಪ್ಪು- ಅಗತ್ಯಕ್ಕೆ ಬೇಕಾದಷ್ಟು, ಹಸಿಮೆಣಸು- 2, ಎಣ್ಣೆ-2ಚಮಚ, ಉಪ್ಪು-ರುಚಿಗೆ.
ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಜಿರಿಗೆ, ಕಡಲೆ, ಉದ್ದಿನಬೇಳೆ, ಹಸಿಮೆಣಸು, ಕರಿಬೇವು ಹಾಕಿ ಹುರಿದು ಶಾವಿಗೆಯನ್ನು ಹುರಿದುಕೊಳ್ಳಿ. ಇದು ತಣ್ಣಗಾದ ಮೇಲೆ ಮೊಸರಿಗೆ ಇದನ್ನು ಬೆರೆಸಿಕೊಂಡು, ಉಪ್ಪು, ಕೊತ್ತಂಬರಿಯನ್ನು ಬೆರೆಸಿಕೊಂಡು 1 ನಿಮಿಷಬಿಡಿ. ತಕ್ಷಣ ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿ ಹಿಟ್ಟು ಹಾಕಿ ಹಬೆಯಲ್ಲಿ 15 ರಿಂದ 20 ನಿಮಿಷ ಬೇಯಿಸಿ ರುಚಿ ರುಚಿಯಾದ ಶಾವಿಗೆ ಇಡ್ಲಿ ಸವಿಯಲು ಸಿದ್ದ.