ಪ್ರತಿದಿನ ಬೆಳಗ್ಗಿನ ತಿಂಡಿಗೇನು ಮಾಡುವುದು ಎಂಬುದು ಎಲ್ಲ ಗೃಹಿಣಿಯರ ಪ್ರತಿದಿನದ ಚಿಂತೆ. ಆದರೆ ಸರಳ ಮತ್ತು ಸುಲಭವಾಗಿ ಶೀಘ್ರದಲ್ಲಿ ಮಾಡಬಹುದಾದ ಕೊತ್ತಂಬರಿ ಸೊಪ್ಪಿನ ಪಲಾವ್ ಹೊಟ್ಟೆಗೂ ಹಿತ ಸೀಮಿತ ಅವಧಿಯಲ್ಲಿ ತಯಾರಿ ಮಾಡಬಹುದಾದ ಸುಲಭ ತಿಂಡಿ. ಬನ್ನಿ ತಡವೇಕೆ ಕೊತ್ತಂಬರಿ ಸೊಪ್ಪಿನ ಪಲಾವ್ ಮಾಡುವುದು ಹೇಗೆಂದು ತಿಳಿಯುವ.
ಬೇಕಾಗುವ ಪದಾರ್ಥಗಳು: ಅಕ್ಕಿ-2ಕಪ್, ಈರುಳ್ಳಿ-3, ಕೊತ್ತಂಬರಿಕಟ್ಟು-1, ಚಕ್ಕೆ-1ತುಂಡು, ಲವಂಗ-4, ಗಜ್ಜರಿ, ಬಟಾಣಿ, ಆಲೂಗಡ್ಡೆ, ಬೀನ್ಸ್ ಎಲ್ಲಸೇರಿಸಿ 2ಕಪ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಉಪ್ಪು- ರುಚಿಗೆತಕ್ಕಷ್ಟು, ಎಣ್ಣೆ-ಸ್ವಲ್ಪ, ಹಸಿಮೆಣಸಿನ ಕಾಯಿ-6.
ಮಾಡುವ ವಿಧಾನ: ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿರಿ. ಲವಂಗ, ಚಕ್ಕೆ, ಹಸಿಮೆಣಸಿನಕಾಯಿ, ಈರುಳ್ಳಿ ಕ್ರಮವಾಗಿ ಹಾಕಿ. ಚೆನ್ನಾಗಿ ಹುರಿಯಿರಿ, ಮಿಕ್ಸ ಮಾಡಿ ಕುಕ್ಕರಿಗೆ ಎಣ್ಣೆ ಹಾಕಿ ಕಾದ ಮೇಲೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಹೆಚ್ಚಿಟ್ಟುಕೊಂಡ ತರಕಾರಿ ಹಾಕಿ ಬಾಡಿಸಿರಿ. ಮೊದಲೇ ತೊಳೆದಿಟ್ಟುಕೊಂಡ ಅಕ್ಕಿ ಹಾಕಿ ಮಿಶ್ರ ಮಾಡಿ, ರುಬ್ಬಿದ ಮಸಾಲೆ, ಉಪ್ಪು ಹಾಕಿ ಕಾಯಿಸಿದ 4 ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಅಥವಾ 2 ವಿಷಲ್ ಕೂಗಿಸಿದರೆ ಸಾಕು. ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬೇಕಿದ್ದರೆ ಲಿಂಬೆ ರಸ ಹಾಕಿರಿ.