News Kannada
Sunday, September 24 2023
ಅಡುಗೆ ಮನೆ

ಫ್ರೂಟ್ ಕಸ್ಟರ್ಡ್ ಮಾಡುವ ಸುಲಭ ವಿಧಾನ ಇಲ್ಲಿದೆ

Here's an easy way to make fruit custard
Photo Credit : Pixabay

ಮಿಶ್ರ ಹಣ್ಣುಗಳು, ಹಾಲು ಆಧಾರಿತ ಸಿಹಿತಿಂಡಿ ಫ್ರೂಟ್ ಕಸ್ಟರ್ಡ್.  ತ್ವರಿತವಾಗಿ ಮತ್ತು ಸುಲಭವಾಗಿ ತಯಾರಿಸಬಹುದು.  ಈ ಸಿಹಿತಿಂಡಿ ಬಿಸಿಲಿನ ಬೇಗಿಗೆ ನಿಮ್ಮ ದೇಹ ಹಾಗೂ ಮನಸ್ಸನ್ನು ತಂಪಾಗಿರಿಸುತ್ತದೆ ಇಲ್ಲಿದೆ ಫ್ರೂಟ್ ಕಸ್ಟರ್ಡ್ ಮಾಡುವ ಸುಲಭ ವಿಧಾನ.

ಬೇಕಾಗುವ ಸಾಮಾಗ್ರಿಗಳು:

2 1/4 ಕಪ್  ಹಾಲು
2 ಟೇಬಲ್ ಚಮಚ ವೆನಿಲ್ಲಾ ಕಸ್ಟರ್ಡ್ ಪೌಡರ್
1/4 ಕಪ್ ಸಕ್ಕರೆ
2 ಕಪ್ ಕತ್ತರಿಸಿದ ಮಿಶ್ರ ಹಣ್ಣುಗಳು (ದ್ರಾಕ್ಷಿ, ಮಾವು, ಬಾಳೆಹಣ್ಣು, ಸೇಬು, ಸ್ಟ್ರಾಬೆರಿ ಅಥವಾ ದಾಳಿಂಬೆ)

ಮಾಡುವ ವಿಧಾನ:

ಒಂದು ಬೌಲ್ ನಲ್ಲಿ 2 ಟೇಬಲ್ ಚಮಚ ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ. 1/4 ಹಾಲು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.  2 ಕಪ್  ಹಾಲನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಮತ್ತು ಕುದಿಯಲು ಬಿಡಿ.  ಕುದಿಯುವಾಗ ಸಕ್ಕರೆಯನ್ನು ಸೇರಿಸಿ.

ಗ್ಯಾಸ್  ಆಫ್ ಮಾಡಿ  ಹಾಲು ಮಿಶ್ರ ಮಾಡಿದ ಕಸ್ಟರ್ಡ್ ಪುಡಿ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಮಿಕ್ಸ್  ಮಾಡಿ.  ಕಡಿಮೆ ಉರಿಯಲ್ಲಿ ದಪ್ಪವಾಗಲು ಪ್ರಾರಂಭಿಸುವವರೆಗೆ (5-6 ನಿಮಿಷಗಳು) ಬೇಯಿಸಿ.

ನಂತರ ಮಿಶ್ರಣವನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ ಅದನ್ನು ಕೋಣೆಯ ತಾಪಮಾನದಲ್ಲಿ ತಣ್ಣಗಾಗಲು ಬಿಡಿ. ನಂತರ ಕನಿಷ್ಠ 1 ಗಂಟೆಗಳ ಕಾಲ ರೆಫ್ರಿಜರೇಟರ್ ನಲ್ಲಿ ಇಟ್ಟು ತಣ್ಣಗಾಗಿಸಿ. ಹಣ್ಣುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ಪಾಕವಿಧಾನದಲ್ಲಿ ಬಳಸುವ ಹಣ್ಣುಗಳು – ಬೀಜರಹಿತ ದ್ರಾಕ್ಷಿ, ಮಾವು, ಬಾಳೆಹಣ್ಣು, ಸೇಬು ಮತ್ತು ಸ್ಟ್ರಾಬೆರಿ. ಚಿಕೂ, ಪಪ್ಪಾಯಿ, ದಾಳಿಂಬೆ ಬೀಜಗಳು, ಬ್ಲೂಬೆರ್ರಿ ಮುಂತಾದ ಯಾವುದೇ ಸಿಹಿ ಹಣ್ಣುಗಳನ್ನು  ಸೇರಿಸಬಹುದು. ಲಭ್ಯತೆ ಮತ್ತು ನಿಮ್ಮ ಆಯ್ಕೆಯ ಪ್ರಕಾರ.

1 ಗಂಟೆಯ ನಂತರ, ಕಸ್ಟರ್ಡ್ ಗೆ ಹಣ್ಣುಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ ರೆಫ್ರಿಜರೇಟರ್ ನಲ್ಲಿ 1 ಗಂಟೆಗಳ ಕಾಲ ರೆಫ್ರಿಜರೇಟರ್ ನಲ್ಲಿ ಇಟ್ಟರೆ  ಹಣ್ಣಿನ ಕಸ್ಟರ್ಡ್ ಸರ್ವ್ ಮಾಡಲು ಸಿದ್ಧವಾಗಿದೆ.

See also  ಕರದಂಡು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು