News Kannada
Thursday, June 01 2023
ಅಡುಗೆ ಮನೆ

ಉತ್ತರ ಭಾರತದ ಜನಪ್ರಿಯ ತಿಂಡಿ ಪನೀರ್ ಪಕೋಡಾ

Paneer Pakoda is a popular snack in North India
Photo Credit : Pixabay

ಉತ್ತರ ಭಾರತದ ಜನಪ್ರಿಯ ತಿಂಡಿ ಪನೀರ್ ಪಕೋಡಾ. ಮಾಡಲು ತುಂಬಾ ಸುಲಭವಾದ ಈ ತಿಂಡಿ ಸಂಜೆಯ ಸಮಯದಲ್ಲಿ ಚಹಾದ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು:
125 ಗ್ರಾಂ ಪನೀರ್
2 ಟೇಬಲ್ ಚಮಚ ಗ್ರೀನ್ ಚಟ್ನಿ
1/4 ಟೀಸ್ಪೂನ್ ಚಾಟ್ ಮಸಾಲಾ ಪುಡಿ
3/4 ಕಪ್ ಕಡಲೆ ಹಿಟ್ಟು
ಒಂದು ಚಿಟಿಕೆ ಅಡಿಗೆ ಸೋಡಾ
1/4 ಟೀಸ್ಪೂನ್ ಗರಂ ಮಸಾಲಾ ಪುಡಿ
1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ, ಡೀಪ್ ಫ್ರೈಯಿಂಗ್ ಗಾಗಿ

ಮಾಡುವ ವಿಧಾನ:

ಪನೀರ್ ಅನ್ನು ಚೌಕಗಳಾಗಿ ಕತ್ತರಿಸಿ. ಪಾಕೆಟ್ ರೀತಿ ತುಂಡರಿಸಿಕೊಂಡು ಅದರೊಳಗೆ ಹಸಿರು ಚಟ್ನಿ ತುಂಬಿಸಿ. ಅದರ ಮೇಲೆ ಚಾಟ್  ಮಸಾಲೆ ಪುಡಿಯನ್ನು ಹಾಕಿ ಇಡಿ.

ಡೀಪ್ ಫ್ರೈಯಿಂಗ್ ಪ್ಯಾನ್ ನಲ್ಲಿ ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.

3/4 ಕಪ್ ಕಡಲೆ ಹಿಟ್ಟು, ಒಂದು ಚಿಟಿಕೆ ಅಡಿಗೆ ಸೋಡಾ, 1/4 ಟೀಸ್ಪೂನ್ ಗರಂ ಮಸಾಲಾ ಪುಡಿ, 1/4 ಟೀಸ್ಪೂನ್ ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ  ನಯವಾದ ಮತ್ತು ದಪ್ಪ ಹಿಟ್ಟನ್ನು ತಯಾರಿಸಿ. ಹಿಟ್ಟಿನಲ್ಲಿ ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ಎಣ್ಣೆ ಮಧ್ಯಮ ಬಿಸಿಯಾದಾಗ, ಸಿದ್ಧಪಡಿಸಿದ ಹಿಟ್ಟಿನಲ್ಲಿ ಸ್ಟಫ್ ಮಾಡಿದ ಪನೀರ್ ತುಂಡನ್ನು ಅದ್ದಿ ಮತ್ತು ಅದನ್ನು ಸಮನಾಗಿ ಲೇಪಿಸಿ.

ಬಿಸಿ ಎಣ್ಣೆಯಲ್ಲಿ ನಿಧಾನವಾಗಿ ಬಿಡಿ.  ಕಂದು ಬಣ್ಣಕ್ಕೆ ತಿರುಗಿದಾಗ, ಅವುಗಳನ್ನು ತಿರುಗಿಸಿ.

ಹಸಿರು ಚಟ್ನಿ ಅಥವಾ ಟೊಮೆಟೊ ಕೆಚಪ್ ನೊಂದಿಗೆ ಬಡಿಸಲು ಬಿಸಿ ಪನೀರ್ ಪಕೋಡಾ ಸಿದ್ದವಾಗುತ್ತದೆ.

See also  ಪತ್ರಿಕಾ ರಂಗದಲ್ಲಿ ಟೀಕೆ, ಟಿಪ್ಪಣಿ ಎದುರಿಸಿ ನಿರ್ಭೀತಿಯಿಂದ ಕೆಲಸ ಮಾಡಬೇಕಾದ್ದು ಪತ್ರಕರ್ತರ ಧರ್ಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು