ಕ್ಯಾರೆಟ್ ಖೀರ್ ಅಥವಾ ಕ್ಯಾರೆಟ್ ಪಾಯಸ ಅತ್ಯಂತ ಸುಲಭವಾಗಿ ತಯಾರಿಸುವ ಸಿಹಿಯಾಗಿದ್ದು ಇದನ್ನು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
1 ಕಪ್ ತುರಿದ ಕ್ಯಾರೆಟ್
2 ಟೇಬಲ್ ಚಮಚ ತುಪ್ಪ
1 1/2 ಕಪ್ ಹಾಲು
2 ಟೇಬಲ್ ಕಂಡೆನ್ಸ್ಡ್ ಮಿಲ್ಕ್
5-6 ಗೋಡಂಬಿ ಬೀಜಗಳು
8-10 ಒಣದ್ರಾಕ್ಷಿ
1 ಟೇಬಲ್ ಚಮಚ ಸಕ್ಕರೆ
1/4 ಟೀಸ್ಪೂನ್ ಏಲಕ್ಕಿ ಪುಡಿ
ಮಾಡುವ ವಿಧಾನ: 2 ಟೇಬಲ್ ಚಮಚ ತುಪ್ಪವನ್ನು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಪ್ರತ್ಯೇಕವಾಗಿ ಹುರಿಯಿರಿ, ಅವುಗಳನ್ನು ತಟ್ಟೆಗೆ ವರ್ಗಾಯಿಸಿ. ಅದೇ ಬಾಣಲೆಯಲ್ಲಿ ತುರಿದ ಕ್ಯಾರೆಟ್ ಸೇರಿಸಿ ಸಣ್ಣ ಉರಿಯಲ್ಲಿ 4-5 ನಿಮಿಷಗಳ ಕಾಲ ಹುರಿಯಿರಿ. ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಧ್ಯಮ ಉರಿಯಲ್ಲಿ ಕುದಿಸಿ.
ಅದು ಕುದಿಯಲು ಪ್ರಾರಂಭಿಸಿದಾಗ, ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ಸುಮಾರು 5 ನಿಮಿಷಗಳ ಕಾಲ ಬೇಯಿಸಿ, ಅದರ ನಡುವೆ ಆಗಾಗ್ಗೆ ಕಲಕಿ. ರುಚಿಗೆ ತಕ್ಕಂತೆ ಸಕ್ಕರೆಯನ್ನು ಸೇರಿಸಿ. ಇದು ದಪ್ಪವಾಗಲು ಪ್ರಾರಂಭಿಸುವವರೆಗೆ ಕಲಕಿ.
ಇದು ದಪ್ಪವಾದಾಗ ಕೊನೆಗೆ ಏಲಕ್ಕಿ ಪುಡಿ, ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಸೇರಿಸಿ ನಿಮ್ಮ ಆಯ್ಕೆಯ ಪ್ರಕಾರ ಕ್ಯಾರೆಟ್ ಖೀರ್ ಅನ್ನು ಬೆಚ್ಚಗೆ ಅಥವಾ ತಣ್ಣಗಾಗಿ ಸರ್ವ್ ಮಾಡಿ