ಸಿಹಿಯಾದ ಜೋಳ ಹಾಗೂ ವಿವಿಧ ತರಕಾರಿಗಳನ್ನು ಬಳಸಿ ಸುಲಭವಾಗಿ ಕಾರ್ನ್ ಸಲಾಡನ್ನು ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
1 ಕಪ್ ತಾಜಾ ಜೋಳ
1/3 ಕಪ್ ಕತ್ತರಿಸಿದ ಸೌತೆಕಾಯಿ
1/3 ಕಪ್ ಕತ್ತರಿಸಿದ ಟೊಮೆಟೊ
2 ಟೇಬಲ್ ಚಮಚ ಕತ್ತರಿಸಿದ ಈರುಳ್ಳಿ
1 ಹಸಿಮೆಣಸಿನಕಾಯಿ, ನುಣ್ಣಗೆ ಕತ್ತರಿಸಿದ
2 ಟೇಬಲ್ ಚಮಚ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
1 ಟೇಬಲ್ ಚಮಚ ಆಲಿವ್ ಎಣ್ಣೆ
1 ಟೇಬಲ್ ಚಮಚ ನಿಂಬೆ ರಸ
1/4 ಟೀಸ್ಪೂನ್ ಕರಿಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಒಂದು ಕುಕ್ಕರ್ ಗೆ ಸ್ವಲ್ಪ ನೀರು ಹಾಗೂ ಜೋಳವನ್ನು ಅಥವಾ ಅಂಗಡಿಯಲ್ಲಿ ಸಿಗುವ ಬಿಡಿ ಜೋಳವನ್ನು ಹಾಕಿ ನಾಲ್ಕು ಸೀಟಿ ಕೂಗಿಸಿ ತಣ್ಣಗಾಗಲು ಬಿಡಿ.
ಒಂದು ಸರ್ವಿಂಗ್ ಬೌಲ್ ಗೆ ಕತ್ತರಿಸಿದ ಸೌತೆಕಾಯಿ ಟೊಮೆಟೊ ಈರುಳ್ಳಿ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಒಂದು ಚಮಚ ನಿಂಬೆರಸ ಹಾಗೂ ಒಂದು ಚಮಚ ಆಲಿವ್ ಎಣ್ಣೆ, ಜೋಳವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಕಾರ್ನ್ ಸಲಾಡ್ ಸವಿಯಲು ಸಿದ್ಧ