ಹಲಸಿನ ಕಾಯಿ ಸೀಸನ್ ಆರಂಭ ಆದ್ರೆ ಎಲ್ಲರ ಮನೆಯಲ್ಲೂ ಹಲಸಿನ ಹಣ್ಣಿನ ಹಪ್ಪಳ, ಹಲಸಿನ ಕಾಯಿ (ಗುಜ್ಜೆ)ಯ, ಹಲಸಿನ ಕಾಯಿ ಚಿಪ್ಸ್ ಹೀಗೆ ನಾನಾ ಬಗೆಯ ತಿಂಡಿ ತಿನಿಸುಗಳನ್ನು ಮಾಡುವುದು ಇದ್ದೇ ಇರುತ್ತದೆ . ಇಂದು ನಾವು ಹಲಸಿನ ಕಾಯಿಯ ಚಿಪ್ಸ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಹಲಸಿನ ಕಾಯಿ ಚಿಪ್ಸ್ ಮಾಡಲು ಬೇಕಾಗುವ ಸಾಮಾಗ್ರಿ: ಹಲಸಿನ ಸೊಳೆ- 20-20, ಕರಿಯಲು ಎಣ್ಣೆ, ರುಚಿಗೆ ಉಪ್ಪು, ಮೆಣಸಿನ ಹುಡಿ.
ಹಲಸಿನ ಕಾಯಿ ಚಿಪ್ಸ್ ತಯಾರಿಸುವ ವಿಧಾನ: ಸ್ವಲ್ಪ ಕಾಯಿಯಾಗಿರುವ ಬಲಿತ ಸೊಳೆಗಳ ಚಿಪ್ಸ್ ತಯಾರಿಸಲು ಚೆನ್ನಾಗಿರುತ್ತವೆ. ಅಂತಹ ಸೊಳೆಗಳನ್ನು ಆಯ್ದುಕೊಂಡು ಉದ್ದವಾಗಿ ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಹೆಚ್ಚಿಟ್ಟಿರುವ ಹಲಸಿನ ಸೊಳೆಗಳನ್ನು ಹಾಕಿ ಸೌಟಿನಿಂದ ತಿರುಗಿಸುತ್ತೀರಿ. ಸೊಳೆಗಳು ಕೆಂಪಗಾಗುತ್ತಾ ಬರುವಾಗ ಉಪ್ಪು ಮತ್ತು ಇಂಗಿನ ನೀರು ಹಾಕಿ ಒಂದೆರಡು ಬಾರಿ ಗೊಟಾಯಿಸಿ ಎಣ್ಣೆಯಿಂದ ತೆಗೆಯಿರಿ. ತಣ್ಣಾಗಾಗುವ ಮೊದಲು ಮೆಣಸಿನ ಪುಡಿಯನ್ನು ಬೆರೆಸಿ ಇದು ಕುರುಕುರಾಗಿದ್ದು ಸವಿಯಲು ಚೆನ್ನಾಗಿರುತ್ತದೆ.