ಬೆಳಗ್ಗೆ ತಿಂಡಿ ಏನು ಮಾಡೋದು ಅನ್ನೋ ಟೆನ್ಶನ್ ಎಲ್ಲಾ ಮನೆಗಳಲ್ಲೂ ಮಹಿಳೆಯರಿಗೆ ಇದ್ದೇ ಇರುತ್ತದೆ. ಅತೀ ಕಡಿಮೆ ಸಮಯದಲ್ಲಿ ಮಾಡಬಹುದಾದ ತಿಂಡಿಗಳನ್ನೇ ಮಹಿಳೆಯರು ಹೆಚ್ಚು ಆಯ್ಕೆ ಮಾಡುತ್ತಾರೆ. ಅಂತವರು ಚಿತ್ರಾನ್ನವನ್ನು ಆಯ್ಕೆ ಮಾಡಿಕೊಳ್ಳಬಹುದು. ಏಕೆಂದರೆ ಚಿತ್ರಾನ್ನ ನಿಮಿಷಗಳಲ್ಲಿ ಮಾಡಬಹುದಾದ ತಿಂಡಿ.
ಚಿತ್ರಾನ್ನ ಮಾಡಲು ಮೊದಲಿಗೆ ಹುರಿದುಕೊಂಡ ಕೆಂಪು ಮೆಣಸಿನಕಾಯಿ, ತೆಂಗಿನ ತುರಿ, ಸಾಸಿವೆ, ಹುಣಸೆ ಹಣ್ಣು ಮತ್ತು ಬೆಲ್ಲವನ್ನು ಮಿಕ್ಸರ್ ಪಾತ್ರೆಯಲ್ಲಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಬಳಿಕ ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಸೇರಿಸಿ, ಹುರಿಯಿರಿ. ನಂತರ ಶೇಂಗಾ ಸೇರಿಸಿ ಹುರಿಯಿರಿ. ತದನಂತರ ಅರಿಶಿನ, ಇಂಗು, ಕರಿಬೇವಿನ ಎಲೆಗಳನ್ನು ಸೇರಿಸಿ, ರುಬ್ಬಿಕೊಂಡ ತೆಂಗಿನ ತುರಿಯನ್ನು ಹಾಕಿ ಮಿಶ್ರಣ ಮಾಡಿ ಎರಡರಿಂದ ಮೂರು ನಿಮಿಷ ಹುರಿಯಲು ಬಿಡಿ. ಈ ಮಿಶ್ರಣಕ್ಕೆ ಅನ್ನ ಮತ್ತು ಉಪ್ಪನ್ನು ಸೇರಿಸಿ, ಸ್ವಲ್ಪ ಹುರಿಯಲು ಬಿಡಿ.