ತೆಂಗಿನಕಾಯಿಂದ ಏನೆಲ್ಲಾ ವಿಧ ವಿಧವಾದ ತಿಂಡಿಗಳನ್ನು ತಯಾರಿಸಬಹುದು. ಇನ್ನು ಸಿಹಿಪ್ರಿಯರಿಗೆ ತೆಂಗಿನಕಾಯಿಂದ ತಯಾರಿಸುವ ಬರ್ಫಿ ಬಹಳ ಇಷ್ಟವಾಗುತ್ತದೆ. ಬಾಯಲ್ಲಿ ಇಟ್ಟರೆ ಕರಗುವ ಈ ಕೊಕನಟ್ ಬರ್ಫಿ ತಯಾರಿಸೋದು ಬಹಳ ಸುಲಭ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರು ಕೂಡಾ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ನೀವೂ ಸಹ ಸುಲಭವಾಗಿ ಒಮ್ಮೆ ಮಾಡಿ ಸವಿಯಿರಿ. . .
ಬೇಕಾಗುವ ಸಾಮಗ್ರಿಗಳು:
ತೆಂಗಿನಕಾಯಿ ತುರಿ – 2 ಕಪ್
ಸಕ್ಕರೆ – 1 ಕಪ್
ಹೆಚ್ಚಿದ ಬಾದಾಮಿ – 4
ಕುಟ್ಟಿ ಪುಡಿಮಾಡಿದ ಏಲಕ್ಕಿ – 4
ತುಪ್ಪ – 2 ಚಮಚ
ಹಾಲು – 2 ಚಮಚ
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‌ಗೆ ಸ್ವಲ್ಪ ತುಪ್ಪ ಹಾಕಿಕೊಂಡು ತುರಿದ ತೆಂಗಿನಕಾಯಿ ತುರಿಯನ್ನು ಹಾಕಿಕೊಂಡು 3 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ತೆಂಗಿನ ತುರಿ ಘಮಬರುವ ಸಮಯದಲ್ಲಿ ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಸಕ್ಕರೆ ನೀರಾಗಿ ಮಿಶ್ರಣ ಗಟ್ಟಿಯಾದ ಬಳಿಕ ಅದಕ್ಕೆ ಕುಟ್ಟಿದ ಏಲಕ್ಕಿ ಪುಡಿಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
* ಈಗ ಒಂದು ಪ್ಲೇಟ್‌ಗೆ ತುಪ್ಪ ಹಚ್ಚಿಟ್ಟುಕೊಳ್ಳಿ. ಬಳಿಕ ಇದಕ್ಕೆ ತೆಂಗಿನತುರಿ ಮಿಶ್ರಣವನ್ನು ಹಾಕಿಕೊಂಡು ಸಮತಟ್ಟಾಗಿ ಮಾಡಿಕೊಳ್ಳಿ. ಬಳಿಕ ಇದರ ಮೇಲೆ ಬಾದಾಮಿ ಹಾಕಿಕೊಂಡು ಚಾಕುವಿನ ಸಹಾಯದಿಂದ ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ.
* ಬಳಿಕ ಇದನ್ನು ಮೂರು ಗಂಟೆ ಹಾಗೇ ಇಡಿ. ಈಗ ತೆಂಗಿನಕಾಯಿ ಬರ್ಫಿ ಸವಿಯಲು ಸಿದ್ಧ