ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಎಲ್ಲರು ಇಷ್ಟ ಪಡುತ್ತಾರೆ. ಪಪ್ಪಾಯಿ ಸೇವನೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಇಂದು ನಾವು ಪಪ್ಪಾಯಿ ಹಣ್ಣಿನ ಹಲ್ವಾ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.
ಪಪ್ಪಾಯಿ ಹಲ್ವಾ ಮಾಡಲು, ಮೊದಲಿಗೆ ಪಪ್ಪಾಯಿ ಹಣ್ಣನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ತುಪ್ಪದಲ್ಲಿ ಚೆನ್ನಾಗಿ ಹುರಿದು ಪೇಸ್ಟ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ, ತುಪ್ಪ ಸೇರಿಸಿ ಪಾಕ ಮಾಡಿ. ನಂತರ ದ್ರಾಕ್ಷಿ, ಗೋಡಂಬಿ , ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಪಪ್ಪಾಯಿ ಹಣ್ಣಿನ ಹಲ್ವಾ ರೆಡಿ ಆಗುತ್ತದೆ.