ಹೋಟೆಲ್ ನಲ್ಲಿ ಮಾಡುವಂತಹ ಬನ್ಸ್ ನೀವು ಮನೆಯಲ್ಲಿಯೇ ಮಾಡಬೇಕಾದರೆ ಇಲ್ಲಿದೆ ನೋಡಿ ಸರಳ ವಿಧಾನ. ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು, ಎರಡ ರಿಂದ ಮೂರು ಮಾಗಿದ ಬಾಳೆಹಣ್ಣು, ಅರ್ಧ ಕಪ್ ಮೈದಾಹಿಟ್ಟು, ಸಕ್ಕರೆ, ಅಡುಗೆ ಸೋಡಾ, ಉಪ್ಪು, ಮೊಸರು, ತೆಂಗಿನ ಎಣ್ಣೆ (ಸ್ವಲ್ಪ), ಕರಿಯಲು ಅಗತ್ಯವಿರುವಷ್ಟು ಎಣ್ಣೆ ಬೇಕಾಗುತ್ತದೆ.
ಇದನ್ನು ಮಾಡಲು, ಮೊದಲಿಗೆ ಬಾಳೆಹಣ್ಣು ಮತ್ತು ಸಕ್ಕರೆಯನ್ನು ಮಿಕ್ಸ್ ಮಾಡಿ ಚೆನ್ನಾಗಿ ತಿರುಗಿಸಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಮೊಸರು, ಸೋಡಾಪುಡಿ, ಉಪ್ಪು ಮತ್ತು ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ ಐದರಿಂದ ಆರು ಗಂಟೆವರೆಗೆ ಹಾಗೆ ಬಿಡಿ. ನಂತರ ಸಣ್ಣ ಸಣ್ಣ ಉಂಡೆ ಮಾಡಿ ಪೂರಿ ಹಾಗೆ ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ.