News Karnataka Kannada
Friday, April 19 2024
Cricket
ಅಡುಗೆ ಮನೆ

ಗರಿಗರಿಯಾದ ಆಲೂ ಟಿಕ್ಕಿ ಮಾಡುವ ಸುಲಭ ವಿಧಾನ ಇಲ್ಲಿದೆ

Here's an easy way to make crispy aloo tikki
Photo Credit : Pixabay

ಗರಿಗರಿಯಾದ ಮಸಾಲೆಯುಕ್ತ ಆಲೂ ಟಿಕ್ಕಿ ಯಾವುದೇ ಸಮಯದಲ್ಲಿ ಸವಿಯಲು ತುಂಬಾ ರುಚಿಕರವಾಗಿರುತ್ತದೆ,. ಆಲೂಗೆಡ್ಡೆ ಬಟಾಣಿ ಹಾಗೂ ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸಿ ಸುಲಭವಾಗಿ ತಯಾರಿಸಬಹುದಾಗಿದೆ.

ಬೇಕಾಗುವ ಸಾಮಾಗ್ರಿಗಳು:
4 ದೊಡ್ಡ ಗಾತ್ರದ ಬೇಯಿಸಿದ ಆಲೂಗಡ್ಡೆ
1/2 ಕಪ್  ಹಸಿರು ಬಟಾಣಿ
4 ಟೇಬಲ್ ಚಮಚ + 4 ಟೇಬಲ್ ಚಮಚ ಡ್ರೈ ಬ್ರೆಡ್ ಕ್ರಂಬ್ಸ್
1 ಟೇಬಲ್ ಚಮಚ ಕಾರ್ನ್ ಫ್ಲೋರ್
1 ಟೀಸ್ಪೂನ್ ತುರಿದ ಶುಂಠಿ
2 ಟೇಬಲ್ ಚಮಚ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
2 ಹಸಿಮೆಣಸಿನಕಾಯಿ
1/2 ಟೀಸ್ಪೂನ್ ಗರಂ ಮಸಾಲಾ ಪುಡಿ
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1 ಟೀಸ್ಪೂನ್ ನಿಂಬೆ ರಸ
1/2 ಟೀಸ್ಪೂನ್ ಸಕ್ಕರೆ
ಉಪ್ಪು
ಎಣ್ಣೆ

ಮಾಡುವ ವಿಧಾನ:

ಒಂದು ಬೌಲ್ ನಲ್ಲಿ ಬೇಯಿಸಿದ ಆಲೂಗೆಡ್ಡೆ, ಬೇಯಿಸಿದ ಬಟಾಣಿ, 4 ಟೇಬಲ್ ಚಮಚ ಬ್ರೆಡ್ ಚೂರುಗಳು, ಕಾರ್ನ್ ಫ್ಲೋರ್, ತುರಿದ ಶುಂಠಿ, ಕೊತ್ತಂಬರಿ ಸೊಪ್ಪು, ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಗರಂ ಮಸಾಲಾ ಪುಡಿ, ಕೆಂಪು ಮೆಣಸಿನ ಪುಡಿ, ನಿಂಬೆ ರಸ, ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅವುಗಳನ್ನ ಚಿಕ್ಕ ಚಿಕ್ಕ ಗಾತ್ರದ ಉಂಡೆಗಳನ್ನಾಗಿ ಮಾಡಿ ಅಂಗೈಯಲ್ಲಿಟ್ಟು ತಟ್ಟಿ ಬ್ರೆಡ್ ಕ್ರಮ್ಸ್ ಗಳಲ್ಲಿ ಉರುಳಿಸಿ ಒಂದು ಪ್ಲೇಟ್ ನಲ್ಲಿ ಇಡಿ.

ಈಗ ಒಂದು ಪ್ರೈಮ್ ಪ್ಯಾನಿಗೆ ಎರಡರಿಂದ ಮೂರು ಟೀ ಸ್ಪೂನ್ ಎಣ್ಣೆ ಹಾಕಿ ತಯಾರು ಮಾಡಿಟ್ಟ ಆಲೂಗೆಡ್ಡೆಯ ಪ್ಯಾಟಿಗಳನ್ನು ಎರಡು ಬದಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿದರೆ ಗರಿ ಗರಿಯಾದ ಆಲೂ ಟಿಕ್ಕಿ ತಯಾರಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು