ಸೀಬೆ ಹಣ್ಣುಗಳು ತಿನ್ನಲು ರುಚಿಯೂ ಇದೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಇದು ಉಪಕಾರಿಯಾಗಿದೆ. ಸೀಬೆ ಹಣ್ಣುಗಳನ್ನು ಹಾಗೆಯೂ ತಿನ್ನುತ್ತಾರೆ ಜೊತೆಗೆ ಜ್ಯೂಸ್ ಮಾಡಿಯೂ ಕುಡಿಯಬಹುದು. ಸೀಬೆ ಹಣ್ಣಿನ ಜ್ಯೂಸ್ ಮಾಡಲು ಮೊದಲಿಗೆ (ಒಂದು ಕಪ್ ಆಗುವಷ್ಟು) ಸೀಬೆ ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಮಿಕ್ಸಿ ಜಾರ್ ಗೆ ಹಾಕಿ ನಂತರ ಅದಕ್ಕೆ ಸಕ್ಕರೆ ಮತ್ತು ಕೋಲ್ಡ್ ವಾಟರ್ ಹಾಕಿ ಪೇಸ್ಟ್ ಹದ ಬರುವವರೆಗೂ ರುಬ್ಬಿಕೊಳ್ಳಿ .
ನಂತರ ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ಪೇಸ್ಟ್ ನಿಂದ ಬೀಜಗಳನ್ನು ಸೋಸಿಕೊಂಡು ಬೇರ್ಪಡಿಸಿ. ಈ ಸೀಬೆ ಹಣ್ಣಿನ ಜ್ಯೂಸು ಗೆ ಕೆಲವು ಐಸ್ ಕ್ಯೂಬ್ ಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.