ಸಾಮಾನ್ಯವಾಗಿ ನಾನ್ವೆಜ್ ಪ್ರೀಯರು ಚಿಕನ್ ಸುಕ್ಕವನ್ನು ಇಷ್ಟ ಪಡುತ್ತಾರೆ. ಅಂಥವರಿಗೆ ಚಿಕನ್ ಸುಕ್ಕ ಮಾಡುವ ಸರಳ ವಿಧಾನ ಇಲ್ಲಿದೆ.
ಚಿಕನ್ ಸುಕ್ಕ ಮಾಡಲು, ತೆಂಗಿನ ತುರಿ, ಮೆಣಸು-15, ಚಮಚ ಕೊತ್ತಂಬರಿ-2, ಚಮಚ ಕಾಳುಮೆಣಸು-1/2, ಚಮಚ ಮೆಂತ್ಯ-½, ಬೆಳ್ಳುಳ್ಳಿ 8ಎಸಳು, ಸಣ್ಣ ಶುಂಠಿ, ಚಕ್ಕೆ ಸಣ್ಣ ಚೂರು, ಲವಂಗ 2, ಗಸಗಸೆ ½ ಚಮಚ, ಕರಬೇವು 10, ಅರುಶಿನಪುಡಿ 1 ಚಮಚ,ತೆಂಗಿನಎಣ್ಣೆ ಎರಡು ಚಮಚ1 ಕೆಜಿ ಕೋಳಿ ಮಾಂಸ, ರುಚಿಗೆ ಉಪ್ಪು
ಚಿಕನ್ ಸುಕ್ಕ ಮಾಡುವ ವಿಧಾನ:
ಮೊದಲಿಗೆ ತೆಂಗಿನ ತುರಿಯನ್ನು ಚೆನ್ನಾಗಿ ಹುರಿದಿಟ್ಟುಕೊಳ್ಳಿ. ಮತ್ತೇ ಎಲ್ಲ ಮಸಾಲ ಪದಾರ್ಥಗಳನ್ನು ಹುರಿಯಿರಿ. ನಂತರ ಎಲ್ಲ ಮಿಶ್ರಣಗಳನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ 2 ದೊಡ್ಡ ಗಾತ್ರದ ನೀರುಳ್ಳಿ ಹಾಕಿ ಹುರಿಯಿರಿ. ನಂತರ ಅದಕ್ಕೆ ಕೋಳಿ ಮಾಂಸವನ್ನು ಹಾಕಿ ಬೇಯಿಸಿ.ಬೆಂದ ನಂತರ ರುಬ್ಬಿ ಕೊಂಡ ಮಸಾಲೆಯುನ್ನು ಹಾಕಿ ಕುದಿಸಿ. ಆದಾದ ಬಳಿಕ ಹುರಿದಿಟ್ಟುಕೊಂಡ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.