ಆರೋಗ್ಯಕರವಾದ ಸೌತೆಕಾಯಿ ಸಲಾಡ್ ಊಟದ ಜೊತೆಗೂ ಸಿದ್ಧ ಅಥವಾ ತೂಕವನ್ನು ಇಳಿಸಲು ಹಾಗೂ ಒಳ್ಳೆಯ ಕ್ಯಾಲೋರಿ ಆಹಾರವಾಗಿಯೂ ಇದನ್ನ ತಿನ್ನಬಹುದು. ಇದನ್ನು ತಯಾರಿಸುವುದು ಕೂಡ ಬಹಳ ಸುಲಭ
ಬೇಕಾಗುವ ಸಾಮಾಗ್ರಿಗಳು:
1/2 ಕತ್ತರಿಸಿದ ಸೌತೆಕಾಯಿ
2 ಕತ್ತರಿಸಿದ ಟೊಮೆಟೊ
1 ಕತ್ತರಿಸಿದ ಈರುಳ್ಳಿ
1/4 ಕಪ್ ನುಣ್ಣಗೆ ಕತ್ತರಿಸಿದ ಎಲೆಕೋಸು
1 ಟೇಬಲ್ ಚಮಚ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
1 ಹಸಿಮೆಣಸಿನಕಾಯಿ, ನುಣ್ಣಗೆ ಕತ್ತರಿಸಿದ
1 ಟೀಸ್ಪೂನ್ ನಿಂಬೆ ರಸ
1/4 ಟೀಸ್ಪೂನ್ ಕರಿಮೆಣಸಿನ ಪುಡಿ
ಉಪ್ಪು
ಮಾಡುವ ವಿಧಾನ:
ಒಂದು ಬಟ್ಟಲನ್ನು ತೆಗೆದುಕೊಂಡು ಕತ್ತರಿಸಿದ ತರಕಾರಿಗಳನ್ನು (ಈರುಳ್ಳಿ, ಸೌತೆಕಾಯಿ, ಟೊಮೆಟೊ, ಎಲೆಕೋಸು) ಮಿಶ್ರಣ ಮಾಡಿ, ನಿಂಬೆ ರಸ, ಕರಿಮೆಣಸು, ಹಸಿಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿದರೆ ಸೌತೆಕಾಯಿ ಸಲಾಡ್ ಸವಿಯಲು ಸಿದ್ಧ.