ಊಟದ ಜೊತೆ ಕ್ಯಾರೆಟ್ ಉಪ್ಪಿನ ಕಾಯಿ ಸವಿಯಲು ಚೆನ್ನ ಎನ್ನುವವರು ಈ ರೀತಿ ಉಪ್ಪಿನ ಕಾಯಿ ಮಾಡಿ.
ಕ್ಯಾರೆಟ್ ಉಪ್ಪಿನ ಕಾಯಿ ಮಾಡಲು, ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ಸಣ್ಣ ಸಣ್ಣ ಪೀಸ್ ಗಳಾಗಿ ಕತ್ತರಿಸಿ ಒಂದು ಪಾತ್ರೆಯಲ್ಲಿ ಹಾಕಿ ಇಡಿ. ನಂತರ ಅದಕ್ಕೆ ಖಾರದ ಪುಡಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಹಾಕಿ ಮಿಕ್ಸ್ ಮಾಡಿ.
ಈಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ, ಸಾಸಿವೆ ಮತ್ತು ಜೀರಿಗೆ, ಇಂಗು ಹಾಕಿ ಉರಿ ಬಂದ ನಂತರ ಆ ಎಣ್ಣೆಯನ್ನು ಕ್ಯಾರೆಟ್ ಹಾಕಿ ಇಟ್ಟಿದ್ದ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ. ಡಬ್ಬದಲ್ಲಿ ತುಂಬಿ ಇಡಿ.