News Kannada
Sunday, February 25 2024
ಅಡುಗೆ ಮನೆ

ಬಾಯಲ್ಲಿ ನೀರೂರಿಸೋ ಬಟರ್ ಗಾರ್ಲಿಕ್ ಸ್ಕ್ವಿಡ್

ಬಟರ್ ಗಾರ್ಲಿಕ್ ಸ್ಕ್ವಿಡ್ ರುಚಿಕರವಾದ ಸೀಫುಡ್. ನಾನ್ವೆಜ್ ಪ್ರಿಯರಿದ್ದರೆ ಇವತ್ತಿನ ಅಡುಗೆಯನೊಮ್ಮೆ ಟ್ರೈ ಮಾಡಿ ನೋಡಿ. ಬೆಣ್ಣೆ ಮತ್ತು ಬೆಳ್ಳುಳ್ಳಿಯಲ್ಲಿ ಬೇಯಿಸಿ ಮಾಡಲಾಗು ಬಟರ್ ಗಾರ್ಲಿಕ್ ಸ್ಕ್ವಿಡ್ ಮನೆಯಲ್ಲಿ ತಯಾರಿಸೋದು ಬಹಳ ಸುಲಭ .
Photo Credit : News Kannada

ಬಟರ್ ಗಾರ್ಲಿಕ್ ಸ್ಕ್ವಿಡ್ ರುಚಿಕರವಾದ ಸೀಫುಡ್. ನಾನ್ವೆಜ್ ಪ್ರಿಯರಿದ್ದರೆ ಇವತ್ತಿನ ಅಡುಗೆಯನೊಮ್ಮೆ ಟ್ರೈ ಮಾಡಿ ನೋಡಿ. ಬೆಣ್ಣೆ ಮತ್ತು ಬೆಳ್ಳುಳ್ಳಿಯಲ್ಲಿ ಬೇಯಿಸಿ ಮಾಡಲಾಗು ಬಟರ್ ಗಾರ್ಲಿಕ್ ಸ್ಕ್ವಿಡ್ ಮನೆಯಲ್ಲಿ ತಯಾರಿಸೋದು ಬಹಳ ಸುಲಭ .

ಬೇಕಾಗುವ ಪದಾರ್ಥಗಳು:
ಸ್ಕ್ವಿಡ್ – ಅರ್ಧ ಕೆಜಿ
ಬೆಣ್ಣೆ – 4 ಟೀಸ್ಪೂನ್
ಕೊಚ್ಚಿದ ಬೆಳ್ಳುಳ್ಳಿ – 4
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್

ಮಾಡುವ ವಿಧಾನ: ಮೊದಲಿಗೆ ಸ್ಕ್ವಿಡ್ ಮೀನುಗಳನ್ನು ಸ್ವಚ್ಛಗೊಳಿಸಿ, ಉಂಗುರಾಕಾರದಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.

ಒಂದು ದೊಡ್ಡ ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ಕೊಚ್ಚಿದ ಬೆಳ್ಳುಳ್ಳಿ ಸೇರಿಸಿ ಹುರಿದುಕೊಳ್ಳಿ. ಬಳಿಕ ಸ್ಕ್ವಿಡ್ ತುಂಡುಗಳನ್ನು ಅದಕ್ಕೆ ಸೇರಿಸಿ, ಅದು ಮೃದುವಾಗುವವರೆಗೆ ಸುಮಾರು 2-3 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ ಸೇರಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಸಿಂಪಲ್ ಬಟರ್ ಗಾರ್ಲಿಕ್ ಸ್ಕ್ವಿಡ್ ತಯಾರಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು