News Kannada
Sunday, March 03 2024
ಕ್ರೈಮ್

ತನ್ನ ಮಗಳನ್ನು ಮದುವೆ ಆಗು ಎಂದು ಪೀಡಿಸುತ್ತಿದ್ದ ಯುವಕನನ್ನು ಹತ್ಯೆಗೈದ ತಂದೆ

Photo Credit :

ಬೆಂಗಳೂರು: ತನ್ನ ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ತಂದೆ ಹತ್ಯೆಗೈದ ಘಟನೆ ಸುಬ್ಬಣ್ಣ ಗಾರ್ಡನ್​​​ ಬಳಿ ನಡೆದಿದೆ.

ಇನ್ನು, ಡೇವಿಡ್​​​ (22) ಕೊಲೆಯಾದ ಯುವಕ. ಯುವತಿ ತಂದೆ ಮಂಜುನಾಥ್​​ ಎಂಬಾತ ಯುವಕನನ್ನು ಕೊಂದ ವ್ಯಕ್ತಿ.

ಯುವತಿ ವಿಲ್ಸನ್ ಗಾರ್ಡನ್ ವಿನಾಯಕ ನಗರದಲ್ಲಿ ವಾಸವಾಗಿದ್ದಳು. ಡೇವಿಡ್​ ಆಟೋ ಡ್ರೈವರ್​ ಆಗಿದ್ದ. ಈತ ಮಂಜುನಾಥ್​​ ಮಗಳನ್ನು ಪ್ರೀತಿಸುತ್ತಿದ್ದು, ಮದುವೆ ಆಗು ಎಂದು ಪೀಡಿಸುತ್ತಿದ್ದ. ಮದುವೆ ಆಗದಿದ್ರೆ ಯುವತಿ ಜತೆಗಿರೋ ಫೋಟೋಗಳನ್ನು ವೈರಲ್​ ಮಾಡೋದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಯುವಕನ್ನು ಮಾತನಾಡಲು ಕರೆದ ಯುವತಿ ತಂದೆ ಬಳಿಕ ಕೊಲೆ ಮಾಡಿದ್ದಾರೆ. ಘಟನೆ ಸಂಬಂಧ ಯುವತಿ ತಂದೆಯನ್ನು ಸದ್ಯ ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು