News Kannada
Saturday, March 02 2024
ಕ್ರೈಮ್

ಮಂಗಳೂರಿನಲ್ಲಿ ಫ್ಲ್ಯಾಟ್‌ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ: ದೂರು

Nelamangala: Cheated on the pretext of paying interest
Photo Credit : Pixabay

ಮಂಗಳೂರು: ಕೇರಳ ಮೂಲದ ಮಹಿಳೆಯರಿಗೆ ಫ್ಲ್ಯಾಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿದ ಇಬ್ಬರು ವ್ಯಕ್ತಿಗಳು ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ರಫ್‌ ಹಸನ್‌ ಹಾಗೂ ಮಹಮ್ಮದ್‌ ಸಲಾಂ ಎಂಬವರು 2015ರಲ್ಲಿ ತಮ್ಮನ್ನು ಪ್ರಾಪರ್ಟಿ ಡೆವಲಪರ್‌ಗಳೆಂದು ಪರಿಚಯಿಸಿಕೊಂಡಿದ್ದಾರೆ. ನಂತರ ನಗರದ ಜೆಪ್ಪುವಿನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ನಿರ್ಮಿಸುವುದಾಗಿ ಹಾಗೂ ಒಂದು ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ 30 ಲಕ್ಷ ರೂಪಾಯಿ ವಂಚಿಸಿದ್ದಾಗಿ ಮಹಿಳೆ ರುಚಿಯಾಬಿ ಮೂಡಂಬೈಲ್‌ ದೂರಿನಲ್ಲಿ ಆರೋಪಿಸಿದ್ದಾರೆ.

ರೋಪಿಗಳು 2017ರಲ್ಲಿ ಫ್ಲ್ಯಾಟ್ ನಿರ್ಮಾಣದ ಯೋಜನೆ ಪೂರ್ಣಗೊಳಿಸಲು ಒಪ್ಪಿಕೊಂಡು ರುಚಿಯಾಬಿ ಅವರಿಗೆ ನಗರದಲ್ಲಿ ನಿವೇಶನವೊಂದನ್ನು ತೋರಿಸಿದ್ದರು. ಅದರಂತೆ, ಆರೋಪಿಗಳು ರುಚಿಯಾಬಿ ಅವರಿಂದ 2015ರ ಜುಲೈ 15 ಮತ್ತು 2016 ರ ನವೆಂಬರ್ 21 ರ ನಡುವೆ ಕ್ರಮವಾಗಿ 20 ಲಕ್ಷ ಮತ್ತು 10 ಲಕ್ಷ ರೂ.ಗಳ ಚೆಕ್ ಪಡೆದಿದ್ದಾರೆ.

ಆದರೆ ಒಪ್ಪಂದದಂತೆ 2017 ರಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ವಿಫಲರಾದ ಅಶ್ರಫ್ ಹಸನ್ ಮತ್ತು ಮೊಹಮ್ಮದ್ ಸಲಾಂ ಅವರು ರುಚಿಯಾಬಿ ಅವರಿಗೆ ತಲಾ 10 ಲಕ್ಷ ರೂ.ಗಳ ಮೂರು ಚೆಕ್‌ಗಳನ್ನು ನೀಡಿದ್ದಾರೆ. ಆದರೆ, ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ಸದ್ಯ, ವಂಚನೆ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು