News Kannada
Sunday, March 03 2024
ಕ್ರೈಮ್

ಖಾಸಗಿ ಬಸ್ ಮಾಲೀಕ ನೇಣುಬಿಗಿದು ಆತ್ಮಹತ್ಯೆ

Private bus owner commits suicide by hanging himself
Photo Credit : News Kannada

ಮಂಗಳೂರು: ಖಾಸಗಿ ಬಸ್  ಮಾಲೀಕ ತಮ್ಮ ಅಪಾರ್ಟ್‌ ಮೆಂಟ್‌ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹೇಶ್ ಮೋಟಾರ್ಸ್ ಮಾಲೀಕ ಪ್ರಕಾಶ್ ಶೆಟ್ಟಿ (40) ಮೃತ ವ್ಯಕ್ತಿ.  ಕದ್ರಿ ಕಂಬಳ ಸಮೀಪದ ಅಪಾರ್ಟ್‌ ಮೆಂಟ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಮಹೇಶ್ ಮೋಟಾರ್ಸ್‌ ಗೆ ಸೇರಿದ ಅನೇಕ ಸಿಟಿ ಬಸ್‌ ಗಳು ಪ್ರತಿದಿನ ಸಂಚರಿಸುತ್ತಿವೆ.

ಬಸ್‌ ಮಾಲೀಕರ ಸಂಘ ತೀವ್ರ ಶೋಕ: ಈ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಸದಸ್ಯರು, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ಉದ್ಯಮಿ ಸಮಾಜ ಸೇವಕರು ದಾನಿಗಳು ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಪ್ರಕಾಶ್‌ ಶೆಟ್ಟಿ ಅಕಾಲಿಕ ಮರಣ ಎಲ್ಲ ಬಸ್‌ ಮಾಲೀಕರಿಗೆ ಆಘಾತ ತಂದಿದೆ ಎಂದು ಹೇಳಿದ್ದಾರೆ. ಎಲ್ಲಾ ಬಸ್ ಮಾಲೀಕರಿಗೂ ಇವರು ಸ್ಪೂರ್ತಿಯ ಚಿಲುಮೆಯಾಗಿದ್ದರು. ಇವರ ಅಗಲಿಕೆಯಿಂದ ಬಸ್ ಮಾಲಕರ ಸಂಘಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ತಂದೆಯವರಾದ ಜಯರಾಮ್ ಶೇಖ ಅವರು ಬಸ್ ಮಾಲಕರ ಸಂಘದ ಹಿರಿಯರು ಹಾಗೂ ಸಂಘದ ಮಾಜಿ ಅಧ್ಯಕ್ಷರಾಗಿರಾಗಿದ್ದಾರೆ. ಪ್ರಕಾಶ್‌ ಶೆಟ್ಟಿ ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಅಜೀಜ್ ಪರ್ತಿಪಾಡಿ ಹಾಗೂ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ.

ಸಹಾಯವಾಣಿ ಸಂಖ್ಯೆ – 9152987821

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 2.5 / 5. Vote count: 14

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು