News Kannada
Monday, February 26 2024
ಕ್ರೈಮ್

ಭವಿಷ್ಯ ಹೇಳ್ತಿದ್ದವಳ ದುರಂತ ಅಂತ್ಯ: ಅತ್ಯಾಚಾರವೆಸಗಿ ಕೊಲೆ ಮಾಡಿರೋ ಶಂಕೆ

The killers who cut off the head of the prophet! Suspected of rape and murder
Photo Credit : News Kannada

ಕಲಬುರಗಿ: ಒಂಟಿ ವೃದ್ದೆಯ ಭೀಕರ ಹತ್ಯೆ ಪ್ರಕರಣ ದಾಖಲಿಸಿಕೊಂಡಿರೋ ಆರ್ ಜೆ ನಗರ ಪೊಲೀಸರು ಹಂತಕರ ಪತ್ತೆಗೆ ಜಾಲ ಬೀಸಿದ್ದಾರೆ. ಅದೆನೇ ಇರಲಿ ದೇವರ ಹೆಸರಿನ ಮೇಲೆ ಭವಿಷ್ಯ ಹೇಳ್ತಿದ್ದ ರತ್ನಾಬಾಯಿ, ತನ್ನ ಭವಿಷ್ಯ ಹಿಗೇ ಅಂತ್ಯವಾಗುತ್ತೆ ಅನ್ನೊದು ತಿಳಿಯದೇ ಇರೋದು ದುರಂತವೇ ಸರಿ.ಹಂತಕರ ಬಂಧನದ ನಂತರವೇ ರತ್ನಾಬಾಯಿ ಹತ್ಯೆಗೆ ಕಾರಣ ಏನು ಅನ್ನೊದು ತಿಳಿಯಲಿದೆ‌.

ಆ ವೃದ್ದೆ ದೇವರ ಹೆಸರಿನ ಮೇಲೆ ಭವಿಷ್ಯ ಹೇಳ್ತಾ ಜನರ ಕಷ್ಟಕಾರ್ಪಣ್ಯಗಳನ್ನ ದೂರ ಮಾಡುತ್ತ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಳು. ಆದರೆ ತನ್ನ ಭವಿಷ್ಯದ ಬಗ್ಗೆನೇ ತಿಳಿಯದೇ ಆಕೆ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾಳೆ.. ಮನೆಗೆ ನುಗ್ಗಿದ ಹಂತಕರ ತಂಡ ಒಂಟಿ ವೃದ್ದೆಯನ್ನ ಭೀಕರವಾಗಿ ಕೊಂದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.

ಬರ್ಬರವಾಗಿ ಹತ್ಯೆಯಾಗಿ ಬಿದ್ದಿರೋ ವೃದ್ದೆ.. ಪೊಲೀಸರಿಂದ ಸ್ಥಳ ಪರಿಶೀಲನೆ.. ಮತ್ತೊಂದೆಡೆ ತಮ್ಮವರನ್ನ ಕಳೆದುಕೊಂಡು ರೋಧಿಸುತ್ತಿರೋ ಕುಟುಂಬಸ್ಥರು.. ಅಷ್ಟಕ್ಕೂ ಈ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ನಗರದಲ್ಲಿ. ಮೇಲಿನ ಫೋಟೊದಲ್ಲಿ ಕಾಣ್ತಾಯಿರೋ ವೃದ್ದೆಯ ಹೆಸರು 65 ವರ್ಷದ ರತ್ನಾಬಾಯಿ ಅಂತ. ಕಲಬುರಗಿಯ ಬಿದನೂರ್ ಗ್ರಾಮದ ನಿವಾಸಿಯಾದ ರತ್ನಾಬಾಯಿ ಕಳೆದ 30 ವರ್ಷಗಳಿಂದ ನಗರದ ಸಂತೋಷ್ ಕಾಲೋನಿಯಲ್ಲಿ ಟಿನ್‌ಶೆಡ್‌ನಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಳು. ಹಿಗೇ ಅನೇಕ ವರ್ಷಗಳಿಂದ ರತ್ನಾಬಾಯಿ ಕೂಲಿ ಕೆಲಸ ಮಾಡ್ತಾ ಗುಡ್ಡಾಪುರದ ದಾನಮ್ಮ ದೇವಿಯ ಹೆಸರಿನ ಮೇಲೆ ಭವಿಷ್ಯ ಹೇಳುತ್ತ ಜನರ ಕಷ್ಟಕಾರ್ಪಣ್ಯಗಳನ್ನ ದೂರ ಮಾಡುತ್ತಿದ್ದಳು. ಆದರೆ ನಿನ್ನೆ ಶೆಡ್‌ಗೆ ನುಗ್ಗಿದ ಹಂತಕರು, ತಲೆಗೆ ಕಲ್ಲಿನಿಂದ ಜಜ್ಜಿ ಆಕೆಯನ್ನ ಅರೆನಗ್ನ ಸ್ಥಿತಿಯಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ. ಆಕೆಯ ಬಟ್ಟೆ ಚೆಲ್ಲಾಪಿಲ್ಲಿಯಾಗಿದ್ದನ್ನ ನೋಡಿದ್ರೆ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.

ರತ್ನಾಬಾಯಿ ಯಾಕೆ ಹತ್ಯೆಯಾದಳು ಅನ್ನೊದು ನಿಗೂಢವಾಗಿದೆ.. ಅಷ್ಟಕ್ಕೂ ದೇವರ ಹೆಸರಿನ ಮೇಲೆ ಭವಿಷ್ಯ ಕೇಳಲು ವಾರಕ್ಕೆ ಎರಡ್ಮೂರು ಸಲ ಸಾಕಷ್ಟು ಜನ ಬಂದು ಹೋಗುತ್ತಿದ್ದರು. ಹೀಗೆ ಬಂದವರೇ ಯಾರಾದರೂ ದ್ವೇಷ ಇಟ್ಟುಕೊಂಡು ರತ್ನಾಬಾಯಿಯನ್ನ ಕೊಲೆ ಮಾಡಿದರಾ ಅನ್ನೊದು ಶಂಕೆ ಕೂಡಾ ವ್ಯಕ್ತವಾಗ್ತಿದೆ.

ರತ್ನಾಬಾಯಿಯನ್ನ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ‌. ಕಳೆದ‌ ಮೂರು ದಿನಗಳಿಂದ ರತ್ನಾಬಾಯಿ ಕಾಲ್ ರಿಸೀವ್ ಮಾಡದಹಿನ್ನೆಲೆಯಲ್ಲಿ ಕೆಲ ಸ್ಥಳೀಯರು ಮನೆಗೆ ಬಂದಿದ್ದಾರೆ. ಈ ವೇಳೆ ಶೆಡ್‌ನಿಂದ ಕೆಟ್ಟ ವಾಸನೆ ಬರ್ತಿದ್ದನ್ನ ನೋಡಿ ಬೀಗ ಮುರಿದು ಒಳಗೆ ಹೋಗಿ‌ ನೋಡಿದ್ದಾರೆ.

ಈ ವೇಳೆ ರತ್ನಾಬಾಯಿ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದ್ದು, ಆಕೆಯ ಮೇಲಿನ ಬಟ್ಟೆ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾರೆ… ಇನ್ನೂ ಸ್ಥಳಕ್ಕೆ ಆರ್‌ಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಚಯಸ್ಥರೆ ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು