News Karnataka Kannada
Friday, April 19 2024
Cricket
ಆರೋಗ್ಯ

ಅಸ್ತಮಾದತ್ತ ಎಚ್ಚರವಾಗಿರುವುದು ಒಳಿತು

Photo Credit :

ಅಸ್ತಮಾದತ್ತ ಎಚ್ಚರವಾಗಿರುವುದು ಒಳಿತು

ವಾತಾವರಣ ಬದಲಾದಾಗ, ನೀರಿನ ವ್ಯತ್ಯಾಸ, ಪಟಾಕಿಯ ಹೊಗೆ, ಧೂಳು ಹೀಗೆ ಹತ್ತು ಹಲವು ಕಾರಣಗಳಿಂದ ಅಸ್ತಮಾ ಇರುವವರು ಬಳಲಬೇಕಾಗುತ್ತದೆ.

ಅಸ್ತಮಾ ಎನ್ನುವುದು ಚಿಕ್ಕವರಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನು ಕಾಡುವ ರೋಗ. ಹೀಗಾಗಿ ನಾವೆಷ್ಟು ಎಚ್ಚರಿಕೆಯಿಂದ ಇರುತ್ತೇವೆಯೋ ಅಷ್ಟೇ ಒಳ್ಳೆಯದು. ಅಸ್ತಮಾವನ್ನು ನಿಯಂತ್ರಣದಲ್ಲಿರಿಸಲು ಏನು ಮಾಡಬೇಕು? ಹೇಗಿರಬೇಕು? ನಮ್ಮ ಜೀವನ ಶೈಲಿಯನ್ನು ಹೇಗೆ ರೂಢಿಸಿಕೊಳ್ಳಬೇಕು? ಮುಂತಾದ ಸಲಹೆಗಳನ್ನು ವೈದ್ಯರು ನೀಡಿದ್ದಾರೆ. ಅವರ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅಸ್ತಮಾದಿಂದ ಬಳಲುತ್ತಿರುವವರು ಒಂದಷ್ಟು ರಿಲ್ಯಾಕ್ಸ್ ಆಗಬಹುದಾಗಿದೆ.

ಸಾಮಾನ್ಯವಾಗಿ ಅಸ್ತಮಾಗೆ ವೈದ್ಯರು ಔಷಧಿ ನೀಡುವಾಗ ಒಂದಷ್ಟು ಸೂಚನೆಗಳನ್ನು ಕೂಡ ನೀಡುತ್ತಾರೆ. ಅದರಂತೆಯೇ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವ ಸಂದರ್ಭದಲ್ಲಿ ಮತ್ತು ಯಾವುದರಿಂದ ಅಸ್ತಮಾ ಉಲ್ಭಣಗೊಳ್ಳುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಅದರಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವಾಗ ವೈದ್ಯರು ನೀಡುವ ತ್ವರಿತ ಶಮನ ನೀಡುವ ಔಷಧಿ ಮತ್ತು ಇನ್ನೇಲರ್ಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಹೊಗೆ, ಧೂಳಿನಿಂದ ಆದಷ್ಟು ದೂರ ಇರುವಂತೆ ನೋಡಿಕೊಳ್ಳುವುದು ಒಳಿತು.

ಮಲಗುವ ಕೋಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಜತೆಗೆ ಒಂದಷ್ಟು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಬೂಷ್ಟ್ ಮತ್ತು ಧೂಳು ರಗ್ಗುಗೆ ಹಿಡಿಯುವುದರಿಂದ ಅದನ್ನು ದೂರವಿಟ್ಟು, ಸ್ವಚ್ಛವಾಗಿರುವ ಹೊದಿಕೆಗಳನ್ನು ಬಳಸಬೇಕು.

ಮಲಗುವ ಕೋಣೆಯಲ್ಲಿರುವ ಮಂಚದ ಹಾಸಿಗೆ, ದಿಂಬು, ಕುರ್ಚಿ, ಇನ್ನಿತರ ಪೀಠೋಪಕರಣಗಳಲ್ಲಿ ಧೂಳುಗಳು ಶೇಖರಣೆಯಾಗುತ್ತವೆ. ಹೀಗಾಗಿ ಇವುಗಳನ್ನು ನಿತ್ಯ ಸ್ವಚ್ಛಗೊಳಿಸಬೇಕು. ಬೆಕ್ಕು, ನಾಯಿಗಳನ್ನು ಜತೆಯಲ್ಲಿ ಮಲಗಿಸಿಕೊಳ್ಳುವುದು ಒಳ್ಳೆಯದಲ್ಲ. ಮಲಗುವ ಕೋಣೆಯಲ್ಲಿ ಧೂಮಪಾನ ಇನ್ನಿತರ ಹೊಗೆ ಬರದಂತೆ ನೋಡಿಕೊಳ್ಳಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ತೊಳೆಯಬೇಕು.

ಮನೆಯಲ್ಲಿ ಕಸ ಗುಡಿಸುವುದು, ವ್ಯಾಕ್ಯೂಮ್ ಮಾಡುವುದು, ಧೂಳು ತೆಗೆಯುವುದು, ಪೇಯಿಂಟ್ ಮಾಡುವುದು, ಕೀಟಗಳಿಗೆ ಸ್ಪ್ರೇ ಮಾಡುವುದು, ಇನ್ನಿತರ ತೀಕ್ಷ್ಣ ಕಾರಕ ಆಹಾರ ಪದಾರ್ಥಗಳನ್ನು ಬೇಯಿಸುವುದು, ಒಗ್ಗರಣೆ ಹಾಕುವುದು ಮೊದಲಾದವುಗಳನ್ನು ಅಸ್ತಮಾ ಪೀಡಿತರು ಮಾಡಬಾರದು, ಪೀಡಿತರು ಮನೆಯಲ್ಲಿದ್ದಾಗಲೂ  ಮಾಡಬಾರದು.

ಮೂರು ಬಾರಿ ಲಘು ಆಹಾರ ಸೇವಿಸುವುದು, ಹಣ್ಣು ಹಂಪಲುಗಳನ್ನು ಸೇವಿಸಬೇಕು. ಸದಾ ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಅಸ್ತಮಾ ಇರುವವರು ನಿರ್ಲಕ್ಷ್ಯ ತೋರಬಾರದು. ವೈದ್ಯರು ನೀಡಿದ ಔಷಧಿಗಳನ್ನು ತೆಗೆದುಕೊಳ್ಳಬೇಕು. ಅಸ್ತಮಾವನ್ನು ನಿಯಂತ್ರಿಸುವ ಔಷಧಿಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕು, ಧೂಮಪಾನ, ಅತಿಯಾದ ಆಹಾರಸೇವನೆ ಒಳ್ಳೆಯದಲ್ಲ. ಅಲರ್ಜಿ ಉಂಟು ಮಾಡುವ ಆಹಾರಗಳಿಂದ ದೂರವಿದ್ದಷ್ಟು ಒಳ್ಳೆಯದು. ಹಾಲಿನ ಉತ್ಪನ್ನಗಳು, ಚಾಕೋಲೆಟ್, ರಿಫೈನ್ಡ್ ವೈಟ್ ಫ್ಲೋರ್, ಬ್ರೆಡ್, ಕೇಕ್, ಸಕ್ಕರೆ ಮುಂತಾದ ಆಹಾರ ಪದಾರ್ಥಗಳಿಂದ ದೂರವಿರಬೇಕು.

ವೈದ್ಯರ ಸೂಚನೆಯಂತೆ ಔಷಧಿಯನ್ನು ಸೇವಿಸಬೇಕೇ ವಿನಃ ಸ್ವಯಂ ಔಷಧೋಪಚಾರ ಒಳ್ಳೆಯದಲ್ಲ. ಹೆಣ್ಣು ಮಕ್ಕಳು ಸ್ನಾನದ ಬಳಿಕ ತೇವಯುಕ್ತ ಕೂದಲನ್ನು ಚೆನ್ನಾಗಿ ಟವೆಲ್ನಿಂದ ಒರೆಸಿ ತೇವ ತೆಗೆಯಬೇಕು. ಕೂದಲಿನಲ್ಲಿ ತೇವದ ಅಂಶ ನಿಲ್ಲದಂತೆ ನೋಡಿಕೊಳ್ಳಬೇಕು.

ಅಸ್ತಮಾ ಯಾವಾಗ ಬೇಕಾದರು ನಮ್ಮನ್ನು ಕಾಡಬಹುದು. ಹೀಗಾಗಿ ಒಂದಷ್ಟು ಎಚ್ಚರಿಕೆಯಿಂದ ಇರುವುದು ಒಳಿತು. ಅಸ್ತಮಾ ಬಾಧಿತರು ಕೂಡ ಸದಾ ಜಾಗೃತರಾಗಿರಬೇಕು ಎಂಬುದನ್ನು ಮರೆಯಬಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು