ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಹಿಮಾಲಯ ಡ್ರಗ್ ಕಂಪೆನಿ ಇವರ ಸಹಯೋಗದೊಂದಿಗೆ ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರವನ್ನು ನವೆಂಬರ್ 19ರ ಶುಕ್ರವಾರದಂದು ಬೆಳಿಗ್ಗೆ ಘಂಟೆ 9.30ರಿಂದ ಸಂಜೆ 4.30 ವರೆಗೆ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಶಲ್ಯತಂತ್ರ ವಿಭಾಗದಲ್ಲಿ ಆಯೋಜಿಸಲಾಗಿದೆ.
ಈ ಚಿಕಿತ್ಸಾ ಶಿಬಿರದಲ್ಲಿ ಗುದಕ್ಕೆ ಸಂಭAದಿಸಿದ ಎಲ್ಲಾ ಕಾಯಿಲೆಗಳಿಗೆ ಉಚಿತ ತಪಾಸಣೆ, ಔಷಧ ಹಾಗೂ ಚಿಕಿತ್ಸೆಯ ಜತೆಗೆ ಈ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಪಥ್ಯಾಪಥ್ಯದ ಬಗ್ಗೆ ವಿವರಿಸಲಾಗುವುದು.
ಸಾರ್ವಜನಿಕರು ಈ ಉಚಿತ ಮೂಲವ್ಯಾಧಿ ಚಿಕಿತ್ಸಾ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9663555378, 9620480722 ನಂಬರನ್ನು ಸಂಪರ್ಕಿಸುವAತೆ ಕೋರಲಾಗಿದೆ.